ADVERTISEMENT

ಕಲಬುರ್ಗಿ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ತಂಡ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 8:20 IST
Last Updated 14 ಡಿಸೆಂಬರ್ 2020, 8:20 IST
   

ಕಲಬುರ್ಗಿ: ಪ್ರವಾಹ ಅಧ್ಯಯನಕ್ಕಾಗಿ ಬಂದಿರುವ ಕೇಂದ್ರ ತಂಡಕ್ಕೆ ಬೆಳೆಹಾನಿಗಾಗಿ ರೈತರಿಗೆ ಪರಿಹಾರ ನೀಡಲಾದ ವಿವರಗಳನ್ನು ನೀಡಲು ವಿಳಂಬ ಮಾಡಿದ ಅಧಿಕಾರಿಗಳನ್ನು ತಂಡದ ಮುಖ್ಯಸ್ಥ ರಮೇಶಕುಮಾರ್ ಘಂಟಾ ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿದ್ದ ರೈತರಿಬ್ಬರಿಗೆ ಪರಿಹಾರ ‌ಸಿಕ್ಕಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಬಯಸಿದರು. ಆ ರೈತರ ಬದಲು ಬೇರೆಯವರ ಮಾಹಿತಿ ನೀಡಲು ಜಿಲ್ಲಾಧಿಕಾರಿ ‌ವಿ.ವಿ. ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಓ ಡಾ.ರಾಜಾ ಪಿ, ಕೃಷಿ ‌ಇಲಾಖೆ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸೂಗುರ ಹಾಗೂ ಕಪನೂರ ಗ್ರಾಮದ ‌ಪಿಡಿಓ ಮುಂದಾದರು. ನಮ್ಮ ಭೇಟಿಯ ಬಗ್ಗೆ ಮುಂಚೆಯೇ ‌ನಿಮಗೆ‌ ಮಾಹಿತಿ ಕೊಟ್ಟಿರುತ್ತೇವೆ. ಆದರೂ ನಾವು ಬಯಸಿದ ಮಾಹಿತಿ ಕೊಡಲಿಲ್ಲ ಅಂದರೆ ಹೇಗೆ ಎಂದು ಪ್ರಶ್ನಿಸಿದರು.

ರಾಜ್ಯ ವಿಪತ್ತು ನಿರ್ವಹಣಾ ‌ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಸಹ ಮುಂದಿನ ಊರಿಗೆ ಹೋಗುವುದರೊಳಗಾಗಿ ಕೇಂದ್ರ ತಂಡದ ಮಾಹಿತಿ ಕೊಡಲು ‌ಅಧಿಕಾರಿಗಳಿಗೆ ತಿಳಿಸಿ ಎಂದು ಸೂಗುರ ಅವರಿಗೆ ತಾಕೀತು ಮಾಡಿದರು.

ADVERTISEMENT

ಕೇಂದ್ರ ತಂಡದ ಸದಸ್ಯ ಭರತೇಂದು ಸಿಂಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.