
ಕಾಳಗಿ: ‘ಸಮಾಜದ ಒಳತಿಗಾಗಿ ಎಲ್ಲವನ್ನು ತ್ಯಾಗಮಾಡಿ ಹಗಲಿರುಳು ಶ್ರಮಿಸುತ್ತಿರುವ ಸುಗೂರಿನ ಚೆನ್ನರುದ್ರಮುನಿ ಶಿವಾಚಾರ್ಯರು ಮನುಷ್ಯ ಜೀವನದ ನೆಮ್ಮದಿಗೆ ಮಹಾದಾಸೋಹಿ ಕಲಬುರಗಿಯ ಶರಣಬಸವೇಶ್ವರ ಪುರಾಣ, ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಿ ಮಹಾನ್ ಕಾರ್ಯ ಮಾಡಿದ್ದಾರೆ’ ಎಂದು ಗುಂಡೇಪಲ್ಲಿಯ ಸೋಮೇಶ್ವರ ಸಂಸ್ಥಾನ ಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು ಹೇಳಿದರು.
ತಾಲ್ಲೂಕಿನ ಸುಕ್ಷೇತ್ರ ಸುಂಠಾಣ ಗ್ರಾಮದ ಸೂಗೂರಿನ ರುದ್ರಮುನೀಶ್ವರ ಹಿರೇಮಠದ ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆ ಪ್ರಯುಕ್ತ ಭಾನುವಾರ ಮಹಾದಾಸೋಹಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
‘ಭಕ್ತರಿಗೆ ಶಾಂತಿ ನೆಮ್ಮದಿ ಸಿಗಲಿ ಎನ್ನುವ ಬಯಕೆಯಿಂದ ಸುಂಠಾಣ ಗ್ರಾಮದಲ್ಲಿ ಮಠ ಕಟ್ಟಿಸಿ, ಸುಂಠಾಣ ಮತ್ತು ಸುಗೂರಿನ ಮಠ ಜಿಲ್ಲೆಯಲ್ಲೇ ಎತ್ತರಕ್ಕೆ ಕೊಂಡೊಯ್ದಿರುವ ಶ್ರೀಗಳ ಕಾರ್ಯ ಮರೆಯಬಾರದು’ ಎಂದರು.
ಕಾರ್ಯಕ್ರಮವನ್ನು ಉದ್ಯಮಿ ಮಲ್ಲಿನಾಥ ಕೋಲಕುಂದಿ ಉದ್ಘಾಟಿಸಿದರು. ಉದ್ಯಮಿ ಮಲ್ಲಿಕಾರ್ಜುನ ಮರತೂರಕರ್, ಸಂತೋಷಕುಮಾರ ಪಾಟೀಲ ಮಂಗಲಗಿ, ಕೋಡ್ಲಿ ಗ್ರಾ.ಪಂ ಅಧ್ಯಕ್ಷೆ ಗೀತಾ ಪ್ರೇಮಕುಮಾರ ಯಲ್ಮಡಗಿ, ಮುಖಂಡರಾದ ವಿಜಯಕುಮಾರ ತುಪ್ಪದ, ವೀರಣ್ಣ ಗಂಗಾಣಿ, ಜಗನ್ನಾಥ ಶೇರಿಕಾರ ಇದ್ದರು.
ಗಡಿಗೌಡಗಾಂವನ ಹಾವಗಿ ಲಿಂಗೇಶ್ವರ ಮಠದ ಶಾಂತವೀರ ಶಿವಾಚಾರ್ಯರು ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಗವಾಯಿಗಳಾದ ಮಲ್ಲಿಕಾರ್ಜುನ ಮತ್ತು ವೀರೇಶ ಬಡಿಗೇರ್ ಸಂಗೀತ ಮತ್ತು ತಬಲಾ ಸಾಥ್ ನೀಡಿದರು.
ಚಂದನಕೇರಾ ಕಟ್ಟಿಮಠದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ರಟಕಲ ವಿರಕ್ತಮಠದ ನೀಲಕಂಠ ಸ್ವಾಮೀಜಿ ಮಾತನಾಡಿದರು.
ಸೂಗೂರು ಹಿರೇಮಠದ ಪೀಠಾಧಿಪತಿ ಚೆನ್ನರುದ್ರಮುನಿ ಶಿವಾಚಾರ್ಯರಿಗೆ ಚಿಂಚೋಳಿಯ ಭಕ್ತರಾದ ಶಿವಕುಮಾರ ಪೋಚಾಲಿ, ಸೋಲಾಪುರದ ಮಯೂರಶ್ರೀ ಹುಂಡೇಕಾರಿ ಹಾಗೂ ಲಾಡ ಚಿಂಚೋಳಿಯ ಭಾಗ್ಯಜ್ಯೋತಿ ಶಿವಕುಮಾರ ಶಿಲ್ಡ ಅವರು ನಾಣ್ಯಗಳ ತುಲಾಭಾರ ಸೇವೆ ಸಲ್ಲಿಸಿದರು.
ರೇವಗ್ಗಿಯ ರೇವಣಸಿದ್ದೇಶ್ವರ ದೇವಾಲಯದಿಂದ ಸುಂಠಾಣದವರೆಗೆ ರೇವಣಸಿದ್ದೇಶ್ವರ ಜ್ಯೋತಿಯಾತ್ರೆ ನಡೆಯಿತು. ಯಾತ್ರೆಗೆ ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ ಹೇರೂರು, ಚಿತ್ತಾಪುರ ತಾಪಂ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ ಮಾಸ್ತರ ಚಿಂಚೋಳಿ ಚಾಲನೆ ನೀಡಿದರು.
ಜ.22 ರಂದು ರುದ್ರಮುನೀಶ್ವರ ಧ್ವನಿ ಸುರುಳಿ ಬಿಡುಗಡೆ ಮತ್ತು ಫೆ.7ರಂದು ಶಾಖಾ ಮಠದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಪುರಾಣ ಮಹಾಮಂಗಲ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.