ADVERTISEMENT

ಕಂಬನಿ ಮಧ್ಯೆ ಶಿವಬಸವ ಶಿವಾಚಾರ್ಯರ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 15:07 IST
Last Updated 13 ಜುಲೈ 2021, 15:07 IST
ಕಾಳಗಿಯಲ್ಲಿ ಮಂಗಳವಾರ ಹಿರೇಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಹಾರಕೂಡದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಪಡೆದರು
ಕಾಳಗಿಯಲ್ಲಿ ಮಂಗಳವಾರ ಹಿರೇಮಠದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಹಾರಕೂಡದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಪಡೆದರು   

ಕಾಳಗಿ: ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಸೋಮವಾರ ಹೃದಯಘಾತದಿಂದ ಲಿಂಗೈಕ್ಯರಾಗಿದ್ದ ಪೀಠಾಧಿಪತಿ ಶಿವಬಸವ ಶಿವಾಚಾರ್ಯರ ಅಂತ್ಯಕ್ರಿಯೆ ಧಾರ್ಮಿಕ ವಿಧಿವಿಧಾನಗಳ ಅನ್ವಯ ಮಂಗಳವಾರ ಜರುಗಿತು.

ಸಾರ್ವಜನಿಕ ದರ್ಶನಕ್ಕಾಗಿ ಶಾಲಾ ಆವರಣದಲ್ಲಿ ಶ್ರೀಗಳ ಪಾರ್ಥಿವ ಶರೀರ ಇರಿಸಲಾಗಿತ್ತು. ಹಲವು ಮಠಾಧೀಶರು, ಜನಪ್ರತಿನಿಧಿಗಳು, ಭಕ್ತರು ಆಗಮಿಸಿ ಹೂಹಾರ ಸಲ್ಲಿಸಿ ಕೈಮುಗಿದು ನಮಿಸಿ ಅಂತಿಮ ದರ್ಶನ ಪಡೆದರು. ಸಂಪ್ರದಾಯದಂತೆ ಪಾರ್ಥಿವ ಶರೀರದ ಅಡ್ಡಪಲ್ಲಕ್ಕಿ ಮೆರವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಾಗಿ ಮಠದ ಆವರಣದ ನೂತನ ಮಂದಿರಕ್ಕೆ ಆಗಮಿಸಿತು.

ಪಂಚಾಚಾರ್ಯರ ತತ್ವದಂತೆ ಹೊನ್ನಕಿರಣಗಿಯ ಚಂದ್ರಗುಂಡ ಶಿವಾಚಾರ್ಯರು, ಚಿಟಗುಪ್ಪದ ಗುರುಲಿಂಗ ಶಿವಾಚಾರ್ಯರು, ಮಂಗಲಗಿಯ ಡಾ.ಶಾಂತಸೋಮನಾಥ ಶಿವಾಚಾರ್ಯರು, ಭರತನೂರಿನ ಗುರುನಂಜೇಶ್ವರ ಸ್ವಾಮೀಜಿ, ಸೇಡಂ ಹಾಲಪ್ಪಯ್ಯ ಮಠದ ಪಂಚಾಕ್ಷರಯ್ಯ ಸ್ವಾಮೀಜಿ, ಮಹಾಗಾಂವ ಕಳ್ಳಿಮಠದ ಗುರುಲಿಂಗ ಶಿವಾಚಾರ್ಯರು, ಸೊಂತದ ಶಿವಕುಮಾರ ಶಿವಾಚಾರ್ಯರು ಪೂಜೆ ವಿಧಿವಿಧಾನಗಳ ಅನುಸಾರ ನೂತನ ಮಂದಿರದೊಳಗೆ ಲಿಂಗೈಕ್ಯ ಶಿವಬಸವ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಿದರು.

ADVERTISEMENT

ಹಾರಕೂಡದ ಡಾ.ಚನ್ನವೀರ ಶಿವಾಚಾರ್ಯರು, ಕಡಗಂಚಿಯ ವೀರಮಹಾಂತ ಶಿವಾಚಾರ್ಯರು, ಹುಲಸೂರಿನ ಶಿವಾನಂದ ಮಹಾಸ್ವಾಮಿಗಳು ಸೇರಿದಂತೆ ದುಧನಿ, ರಾಯಚೂರ, ಸುಗೂರ, ಬಣಬಿ ಶ್ರೀಗಳು ಮತ್ತು ಸಂಸದ ಡಾ.ಉಮೇಶ ಜಾಧವ, ಶಾಸಕ ಡಾ.ಅವಿನಾಶ ಜಾಧವ, ಮುಖಂಡ ಸುಭಾಷ ರಾಠೋಡ, ರಾಜೇಶ ಗುತ್ತೇದಾರ ನುಡಿನಮನ ಸಲ್ಲಿಸಿದರು.

ಸೊಂತ, ಮಳಖೇಡ, ಚಂದನಕೇರಾ, ರಟಕಲ, ಲಾಡಮುಗಳಿ, ಹೊಸಳ್ಳಿ, ಕೋಡ್ಲಿ, ಡೊಣ್ಣೂರ ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡ ರಾಮಚಂದ್ರ ಜಾಧವ, ಗೌತಮ ಪಾಟೀಲ, ಜಬ್ಬರ ಸಾಗರ, ಶಿವಶರಣಪ್ಪ ಕಮಲಾಪುರ, ಶರಣಗೌಡ ಪಾಟೀಲ, ಸತ್ಯನಾರಾಯಣ ವನಮಾಲಿ, ಮಲ್ಲಿನಾಥ ಪಾಟೀಲ, ವಿಶ್ವನಾಥ ವನಮಾಲಿ, ರವಿದಾಸ ಪತಂಗೆ, ಸಂತೋಷ ಪತಂಗೆ, ಪ್ರಶಾಂತ ಕದಂ ಅನೇಕರು ಇದ್ದರು.

ಆಗಮಿಸಿದ ಸುತ್ತಲಿನ ಅಪಾರ ಭಕ್ತರು, ಸ್ಥಳೀಯ ಸದ್ಭಕ್ತರು ಶ್ರೀಗಳನ್ನು ಸ್ಮರಿಸಿ ಕಣ್ಣೀರು ಹಾಕುತ್ತಲೇ ಜಯಘೋಷ ಮೊಳಗಿಸಿದರು.

ತಹಶೀಲ್ದಾರ್ ನಾಗನಾಥ ತರಗೆ, ಸಿಪಿಐ ವಿನಾಯಕ ನಾಯಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ,ಕಂದಾಯ ನಿರೀಕ್ಷಕ ರೇವಣಸಿದ್ದಯ್ಯ ಮಠಪತಿ ಇದ್ದರು. ಪಿಎಸ್ಐ ದಿವ್ಯಾ ಅಂಬಾಟಿ, ಕ್ರೈಂ ಪಿಎಸ್ಐ ಇಂದುಮತಿ, ಮಾಡಬೂಳ ಪಿಎಸ್ಐ ವಿಜಯಕುಮಾರ ನಾಯಕ, ಬಂದೋಬಸ್ತ್ ಕಲ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.