ADVERTISEMENT

ಕಾಳಗಿಗೆ ಪಟ್ಟಣ ಪಂಚಾಯಿತಿ ಭಾಗ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 14:57 IST
Last Updated 11 ಜನವರಿ 2019, 14:57 IST

ಕಾಳಗಿ: ಇಲ್ಲಿಯ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಕಾಳಗಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ರಚಿಸಿದ್ದರೂ,ಇಲ್ಲಿ ಇನ್ನೂಗ್ರಾಮ ಪಂಚಾಯಿತಿ ಇತ್ತು.

ಕಾಳಗಿ, ಲಕ್ಷ್ಮಣ ನಾಯಕ ತಾಂಡಾ, ಕಿಂಡಿ ತಾಂಡಾ, ನಾಮು ನಾಯಕ ತಾಂಡಾ, ಕರಿಕಲ್‌ ತಾಂಡಾ ಮತ್ತು ದೇವಿಕಲ್‌ ತಾಂಡಾ ಪ್ರದೇಶಗಳನ್ನು ಕಾಳಗಿ ಪಟ್ಟಣ ಪಂಚಾಯಿತಿಒಳಗೊಂಡಿದೆ. ಒಟ್ಟಾರೆ 17.43 ಚದುರ ಕಿ.ಮೀ. ವ್ಯಾಪ್ತಿ ಹೊಂದಿದೆ.

ADVERTISEMENT

ಕಾಳಗಿ ಗ್ರಾಮ ಪಂಚಾಯಿತಿ ಸದಸ್ಯರೇ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಪಟ್ಟಣ ಪಂಚಾಯಿತಿಯು ಪೌರಾಡಳಿತ ಇಲಾಖೆಯ ವ್ಯಾಪ್ತಿಗೆ ಒಳಪಡಲಿದ್ದು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬದಲು ಇಲ್ಲಿ ಮುಖ್ಯಾಧಿಕಾರಿ ಇರಲಿದ್ದಾರೆ. ಅಭಿವೃದ್ಧಿಗೆ ಹೆಚ್ಚಿನ ಅನುದಾನವೂ ಲಭ್ಯವಾಗಲಿದೆ.

10 ಸಾವಿರಕ್ಕಿಂತ ಹೆಚ್ಚು ಮತ್ತು 20 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರಬೇಕು. ಆ ಪ್ರದೇಶದ ಜನಸಂಖ್ಯೆಯ ಸಾಂದ್ರತೆ ಒಂದು ಚದುರ ಕಿ.ಮೀ.ಗೆ 400ಕ್ಕಿಂತ ಕಡಿಮೆ ಇರಬಾರದು. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಪ್ರಮಾಣ ಶೇ 50ಕ್ಕಿಂತ ಕಡಿಮೆ ಇರಬಾರದು ಎಂಬುದು ಪಟ್ಟಣ ಪಂಚಾಯಿತಿ ರಚನೆಯ ಮಾನದಂಡ. ಈ ಅರ್ಹತೆ ಕಾಳಗಿಗೆ ಇರುವುದರಿಂದ ಅದನ್ನು ಮೇಲ್ದರ್ಜೆಗೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.