ಕಾಳಗಿ: ಇಲ್ಲಿನ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯ ಮತದಾನ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ.
ಕಾಳಗಿ ಪಟ್ಟಣ ಮತ್ತು 6 ತಾಂಡಾಗಳು ಸೇರಿ ಒಟ್ಟು 11ವಾರ್ಡ್‌ಗಳ 11 ಸ್ಥಾನಗಳಿಗೆ ಸಲ್ಲಿಸಿದ 32 ನಾಮಪತ್ರಗಳಲ್ಲಿ 3 ನಾಮಪತ್ರ ತಿರಸ್ಕೃತಗೊಂಡಿದ್ದು, 5 ನಾಮಪತ್ರ ವಾಪಸ್ ಪಡೆಯಲಾಗಿದೆ. ಅಂತಿಮವಾಗಿ ಉಳಿದ 24 ಅಭ್ಯರ್ಥಿಗಳಲ್ಲಿ ಪ್ರತಿಸ್ಪರ್ಧೆ ಇಲ್ಲದ ಕಾರಣ ವಾರ್ಡ್ ನಂ.04ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನು ಬಿಜೆಪಿ-10, ಕಾಂಗ್ರೆಸ್-10, ಆಮ್ ಆದ್ಮಿ-1 ಮತ್ತು ಪಕ್ಷೇತರ-2 ಹೀಗೆ ಒಟ್ಟು 23 ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.
ಪಟ್ಟಣ ಪಂಚಾಯಿತಿ ಫಲಿತಾಂಶ ರಾಜಕೀಯ ಪಕ್ಷಗಳ ಮೇಲೆ ಪರಿಣಾಮ ಬೀರುವುದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಜಿದ್ದಾಜಿದ್ದಿಯ ಅಖಾಡ ನಿರ್ಮಾಣಗೊಂಡಿದೆ.
ಕ್ಷೇತ್ರದ ಶಾಸಕ ಡಾ.ಅವಿನಾಶ ಜಾಧವ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ವಿ.ಪ ಸದಸ್ಯ ಜಗದೇವ ಗುತ್ತೇದಾರ ಅವರಿಗೆ ಈ ಚುನಾವಣೆ ಸವಾಲ್ ಆಗಿದೆ. ಮೇಲ್ನೋಟಕ್ಕೆ ಅಭ್ಯರ್ಥಿಗಳ ಗೆಲುವಿಗೆ ಎರಡು ಪಕ್ಷಗಳಲ್ಲಿ ಪ್ರಚಾರದ ಕಾವು ಜೋರಾಗಿದೆ. ಎರಡು ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಬಿಜೆಪಿ-ಕಾಂಗ್ರೆಸ್‌ಗೆ ನಿದ್ದೆಗೆಡಿಸಿದ್ದಾರೆ.
ಕಾಳಗಿ ಪ್ರಸಿದ್ಧ ಕ್ಷೇತ್ರವಾಗಿದ್ದರಿಂದ ಪ್ರಯತ್ನಮೀರಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಜನರು ನಮ್ಮನ್ನು ಅಷ್ಟೇ ಗೌರವ ತೋರುತ್ತಿದ್ದಾರೆರಾಜೇಶ ಗುತ್ತೇದಾರ ಜಿ.ಪಂ ಮಾಜಿ ಸದಸ್ಯ
ಶಾಸಕ ಡಾ.ಅವಿನಾಶ ಜಾಧವ ಅವರು ಸಾಕಷ್ಟು ಅನುದಾನ ತಂದು ಕಾಳಗಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತಿದ್ದೇವೆಶೇಖರ ಪಾಟೀಲ ಬಿಜೆಪಿ ಜಿಲ್ಲಾ ಕಾರ್ಯದರ್ಶಿ
ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ
ವಾರ್ಡ್ ನಂ.1: ಗುರುರಾಜ ತಿಪ್ಪಯ್ಯ (ಕಾಂಗ್ರೆಸ್) ಮಂಜುನಾಥ ಸಿದ್ದಯ್ಯ (ಬಿಜೆಪಿ) ವಾರ್ಡ್
ನಂ.2: ಜಗದೀಶ ಜೈಶಂಕರ (ಬಿಜೆಪಿ) ಬಸವರಾಜ ಪರಮೇಶ್ವರ (ಕಾಂಗ್ರೆಸ್) ಶೇಕ್ ಪರ್ಹಾನ ಪೀರಅಹ್ಮದ್ (ಆಮ್ ಆದ್ಮಿ) ಬಾಬು ಮಲ್ಲಣ್ಣ (ಪಕ್ಷೇತರ) ವಾರ್ಡ್
ನಂ.03: ಲಲಿತಾಬಾಯಿ ಸಿದ್ರಾಮಪ್ಪಾ (ಕಾಂಗ್ರೆಸ್) ಸಿದ್ದಲಿಂಗಮ್ಮ ಚಂದ್ರಶೆಟ್ಟಿ (ಬಿಜೆಪಿ) ವಾರ್ಡ್
ನಂ.05: ರಮೇಶ ಚಂದ್ರಕಾಂತ (ಬಿಜೆಪಿ) ರವಿದಾಸ ಸುಧಾಕರ (ಕಾಂಗ್ರೆಸ್) ವಾರ್ಡ್
ನಂ.06: ಲಾಲಬಿ ಸಾದಿಕಮಿಯ್ಯ (ಬಿಜೆಪಿ) ಸಾಲಿಯಾಬೇಗಂ ಮಹೆಬೂಬ (ಕಾಂಗ್ರೆಸ್)
ವಾರ್ಡ್ ನಂ.07: ಶರಣಪ್ಪ ತಿಮ್ಮಯ್ಯ (ಕಾಂಗ್ರೆಸ್) ಹಣಮಂತ ಗುಂಡಪ್ಪ (ಬಿಜೆಪಿ)
ವಾರ್ಡ್ ನಂ.08: ಉಷಾರಾಣಿ ದತ್ತಾತ್ರೇಯ (ಕಾಂಗ್ರೆಸ್) ಮೀನಾಕ್ಷಿ ಪ್ರಶಾಂತ (ಬಿಜೆಪಿ)
ವಾರ್ಡ್ ನಂ.09: ಚಂದ್ರಕಲಾ ಚಂದ್ರಕಾಂತ (ಬಿಜೆಪಿ) ಜಯಶ್ರೀ ಸಂತೋಷಕುಮಾರ (ಕಾಂಗ್ರೆಸ್)
ವಾರ್ಡ್ ನಂ.10: ಜೀತೇಂದ್ರ ನೂರಸಿಂಗ್ ರಾಠೋಡ (ಬಿಜೆಪಿ) ವಿಜಯಕುಮಾರ ಶಂಕರ (ಕಾಂಗ್ರೆಸ್) ರೋಹಿತ್ ಆನಂದ (ಪಕ್ಷೇತರ)
ವಾರ್ಡ್ ನಂ.11: ಪಾರ್ವತಿ ವಿಠಲರಾವ (ಬಿಜೆಪಿ) ಪೂಜಾ ರಾಜು (ಕಾಂಗ್ರೆಸ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.