ADVERTISEMENT

ಕಾಳಗಿ ಪಟ್ಟಣ ಪಂಚಾಯಿತಿಯ ಪ್ರಥಮ ಸಾರ್ವತ್ರಿಕ ಚುನಾವಣೆ: ನಾಮಪತ್ರ ಸಲ್ಲಿಕೆ ಶುರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 5:20 IST
Last Updated 29 ಜುಲೈ 2025, 5:20 IST
ಕಾಳಗಿ ಪಟ್ಟಣ ಪಂಚಾಯಿತಿ ಕಚೇರಿ
ಕಾಳಗಿ ಪಟ್ಟಣ ಪಂಚಾಯಿತಿ ಕಚೇರಿ   

ಕಾಳಗಿ: ಸ್ಥಳೀಯ ಪಟ್ಟಣ ಪಂಚಾಯಿತಿಯ ಪ್ರಥಮ ಸಾರ್ವತ್ರಿಕ ಚುನಾವಣೆ ಆಗಸ್ಟ್ 17ರಂದು ನಡೆಯಲಿದೆ. ಈ ನಿಮಿತ್ತ ಜಿಲ್ಲಾಧಿಕಾರಿ ಇಂದು (ಜು.29) ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ನೀತಿ ಸಂಹಿತೆ ಈ ಕ್ಷಣದಿಂದಲೇ ಜಾರಿಯಾಗಲಿದೆ.

ಕಾಳಗಿ ಪಟ್ಟಣ ಹಾಗೂ ಸುತ್ತಲಿನ ಲಕ್ಷ್ಮಣನಾಯಕ ತಾಂಡಾ, ಸುಬ್ಬುನಾಯಕ ತಾಂಡಾ, ನಾಮುನಾಯಕ ತಾಂಡಾ, ಚಿಕ್ಕಂಡಿತಾಂಡಾ, ಕರೆಕಲ್ ತಾಂಡಾ, ದೇವಿಕಲ್ ತಾಂಡಾ ಒಳಗೊಂಡು ಸಾಮಾನ್ಯ-3, ಸಾಮಾನ್ಯ ಮಹಿಳೆ-3, ಪರಿಶಿಷ್ಟ ಜಾತಿ-2, ಪರಿಶಿಷ್ಟ ಜಾತಿ ಮಹಿಳೆ-2, ಪರಿಶಿಷ್ಟ ಪಂಗಡ-1 ಹೀಗೆ ಒಟ್ಟು 11ವಾರ್ಡಿನ 11ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದಿನಿಂದಲೇ ಶುರುವಾಗಲಿದೆ.

ನಾಮಪತ್ರ ಸಲ್ಲಿಕೆಗೆ ಆಗಸ್ಟ್ 5 ಕೊನೆಯ ದಿನವಾಗಿದೆ. ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಇಒ, ಚುನಾವಣಾಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ನಾಮಪತ್ರ ಸ್ವೀಕರಿಸಲಿದ್ದಾರೆ.

ADVERTISEMENT

ಮಂಗಲಗಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಅಣ್ಣಾರಾಯ ಬಿರಾದಾರ ಸಹಾಯಕ ಚುನಾವಣಾಧಿಕಾರಿಯಾಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಆಂಜನೇಯ ಎಂ.ಸಿ.ಸಿ ಅಧಿಕಾರಿಯಾಗಿ, ತಾಲ್ಲೂಕು ಪಂಚಾಯಿತಿ ಯೋಜನಾಧಿಕಾರಿ ಜ್ಯೋತಿ ಲೆಕ್ಕಪತ್ರ ಪರಿಶೀಲನಾಧಿಕಾರಿಯಾಗಿ, ತಾ.ಪಂ ಎಫ್.ಡಿ.ಎ ಮಹೇಂದ್ರ ಭೀಮಶಾ ಸಹಾಯಕ ಲೆಕ್ಕಪತ್ರ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಬಿ. ಆದೇಶಿಸಿದ್ದಾರೆ.

‘ಚುನಾವಣೆ ಸಂದರ್ಭದಲ್ಲಿ ಯಾವುದೇ ತರಹದ ಅಶಾಂತಿ ನಿರ್ಮಾಣವಾಗದಂತೆ ನೋಡಿಕೊಳ್ಳಲು ಚುನಾವಣಾಧಿಕಾರಿಗಳಿಗೆ ಅಗತ್ಯ ಸಹಕಾರ ನೀಡಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಅಗತ್ಯಕ್ರಮ ಕೈಗೊಳ್ಳಲಾಗಿದೆ’ ಎಂದು ಸಿಪಿಐ ಜಗದೇವಪ್ಪ ಪಾಳಾ ಪ್ರತಿಕ್ರಿಯಿಸಿದರು.

ಜಿಲ್ಲಾಧಿಕಾರಿಗಳು ಇಂದು (ಜು.29) ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು ಬಳಿಕ ಕಾಳಗಿ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಆ.5ರ ವರೆಗೆ ನಾಮಪತ್ರ ಸ್ವೀಕರಿಸಲಾಗುವುದು
ಪೃಥ್ವಿರಾಜ ಬಿ. ಪಾಟೀಲ ತಹಶೀಲ್ದಾರ್ ಕಾಳಗಿ

ಚುನಾವಣಾ ವೇಳಾಪಟ್ಟಿ

ಜಿಲ್ಲಾಧಿಕಾರಿ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ: ಜು.29  ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಆ.05  ನಾಮಪತ್ರ ಪರಿಶೀಲಿಸುವ ದಿನಾಂಕ: ಆ.06  ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: ಆ.08  ಮತದಾನ ನಡೆಯಲಿರುವ ದಿನಾಂಕ: ಆ.17  ಮತಗಳ ಎಣಿಕೆಯ ದಿನಾಂಕ: ಆ.20

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.