ADVERTISEMENT

ಕಮಲಾಪುರ: ಕತ್ತು ಬಿಗಿದು ವೃದ್ಧೆ ಕೊಲೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 5:03 IST
Last Updated 20 ನವೆಂಬರ್ 2025, 5:03 IST
<div class="paragraphs"><p>ರಾಧಾಬಾಯಿ</p></div>

ರಾಧಾಬಾಯಿ

   

ಕಮಲಾಪುರ (ಕಲಬುರಗಿ ‌ಜಿಲ್ಲೆ): ವೃದ್ಧೆಯೊಬ್ಬರ ಕತ್ತು ಬಿಗಿದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಧಮ್ಮೂರ ಪುನರ್ವಸತಿ ಕೇಂದ್ರದಲ್ಲಿ ಬುಧವಾರ ರಾತ್ರಿ ನಡೆದಿದೆ.

ರಾಧಾಬಾಯಿ ಅಣ್ಣಪ್ಪ ಮೇಲಕೇರಿ (70) ಕೊಲೆಯಾದ ಮಹಿಳೆ.

ADVERTISEMENT

ಮನೆಯಲ್ಲಿ ರಾಧಾಬಾಯಿಯ ಕೊಲೆಯಾಗಿದ್ದು, ರಾತ್ರಿ ಮನೆಗೆ ಆಗಮಿಸಿದ ಮಗ ಮಲ್ಲಿಕಾರ್ಜುನ ತನ್ನ ತಾಯಿ ರಾಧಾಬಾಯಿ ಮೃತದೇಹ ಕಂಡು ವಿಷಯ ಪೊಲೀಸರಿಗೆ ತಿಳಿಸಿದ್ದಾನೆ. ಕತ್ತಿಗೆ ಬಿಗಿದ ಗಾಯಗಳಿದ್ದು, ಬುಧವಾರ ಸಂಜೆ ಹೊತ್ತಲ್ಲೆ ಕೊಲೆಯಾದ ಶಂಕೆಯಿದ್ದು, ಈ ಘಟನೆ ರಾತ್ರಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಅತ್ತೆ ಸೊಸೆಯ ಕಲಹ ಇರುವುದರಿಂದ ರಾಧಾಬಾಯಿ, ಗಂಡ ಅಣ್ಣಪ್ಪ, ಮಗ ಮಲ್ಲಿಕಾರ್ಜುನ ಒಂದು ಕಡೆ ವಾಸಿಸುತ್ತಿದ್ದರು. ಮಲ್ಲಿಕಾರ್ಜುನನ ಹೆಂಡತಿ ಹಾಗೂ ಇಬ್ಬರು ಮಕ್ಕಳು ಮನೆಯ ಪಕ್ಕದಲ್ಲೆ ಬೇರೆ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಕೊಲೆ ಆರೋಪಿಗಳು ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿವೈಎಸ್ಪಿ ಲೋಕೇಶ್ವರ ಪೂಜಾರಿ, ಪಿಎಸ್ಐ ಬಸವರಾಜ ಚಿತ್ತಕೋಟಿ, ಸಿಬ್ಬಂಧಿಗಳಾದ ಕಿಶನ ಜಾಧವ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.