ಕಲಬುರಗಿ: ಇಲ್ಲಿನ ಕಣ್ಣಿ ಮಾರುಕಟ್ಟೆ ಕಟ್ಟಡದ ನಾಮಫಲಕ ತೆರವಿಗೆ ಸಂಬಂಧಿಸಿದಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಬ್ಬರು ಅಧಿಕಾರಿಗಳಿಗೆ ಗುರುವಾರ ಕಪ್ಪು ಮಸಿ ಬಳಿದಿದ್ದಾರೆ.
ನಗರದ ಕುಡಾ ಕಚೇರಿ ಎದುರು ಜಮಾಯಿಸಿದ ಕರವೇ ಕಾರ್ಯಕರ್ತರು ‘ಕನ್ನಡ ಮತ್ತು ಇಂಗ್ಲಿಷ್‌ನಲ್ಲಿದ್ದ ನಾಮಫಲಕ ತೆರವುಗೊಳಿಸಿದ್ದು ಖಂಡನೀಯ. ಇಂದೇ ಅದನ್ನು ಅಳವಡಿಸಬೇಕು’ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆಯ ಕಲಬುರಗಿ ವಿಭಾಗೀಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಅಮೀನ್ ಮುಕ್ತಾರ್ ಹಾಗೂ ಕುಡಾ ಆಯುಕ್ತ ಗಂಗಾಧರ ಮಳಗಿ ಅವರಿಗೆ ಇದೇ ಸಂದರ್ಭದಲ್ಲಿ ಕಾರ್ಯಕರ್ತರು ಕಪ್ಪು ಮಸಿ ಹಚ್ಚಿದ್ದಾರೆ.
ಮಸಿ ಹಚ್ಚಿದ್ದನ್ನು ಖಂಡಿಸಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು–ಸಿಬ್ಬಂದಿ ಸೇರಿ ನೂರಾರು ಜನ ಮಧ್ಯಾಹ್ನ 2 ಗಂಟೆಯಿಂದ ಕೆಲಸ ಸ್ಥಗಿತ ಸಂಜೆ ತನಕ ಪ್ರತಿಭಟಿಸಿದರು.
ಮತ್ತೊಂದೆಡೆ, ಮಸಿ ಬಳಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದವರು, ಮುಸ್ಲಿಮರು ಪ್ರತಿಭಟನೆ ನಡೆಸಿದರು.
ಮಸಿ ಬಳಿದಿರುವುದಕ್ಕೆ ಸಂಬಂಧಿಸಿದಂತೆ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ವಿಲಾಸ ರಾಠೋಡ ಹಾಗೂ ಇತರ 20–25 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.