ಕಲಬುರಗಿ: ಉದ್ಯಮಿ ಎಸ್.ಎಸ್.ಪಾಟೀಲರ 3ನೇ ಪುಣ್ಯಸ್ಮರಣೆ ಹಾಗೂ ಆರು ಸಾಧಕರಿಗೆ ‘ಕರ್ಮಯೋಗಿ’ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ‘ಜಸ್ಟ್ ಕ್ಲಬ್ ಮತ್ತು ರೆಸಾರ್ಟ್’ನಲ್ಲಿ ಆಗಸ್ಟ್ 23ರಂದು ಸಂಜೆ 5 ಗಂಟೆಗೆ ನಡೆಯಲಿದೆ.
ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಎಸ್.ಘಂಟಿ (ಶಿಕ್ಷಣ), ಖ್ಯಾತ ವೈದ್ಯ ಪಿ.ಎಸ್.ಶಂಕರ (ವೈದ್ಯಕೀಯ), ಉದ್ಯಮಿ ರಾಘವೇಂದ್ರ ಮೈಲಾಪುರ (ಉದ್ಯಮ), ಸಾಹಿತಿ ಸ್ವಾಮಿರಾವ ಕುಲಕರ್ಣಿ (ಸಾಹಿತ್ಯ), ಪುಸಕ್ತ ಪ್ರಕಾಶಕ ಅಪ್ಪಾರಾವ ಅಕ್ಕೋಣೆ (ಜ್ಞಾನ ಪ್ರಸಾರ) ಹಾಗೂ ಬೀದರ್‌ನ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ (ಲಲಿತ ಕಲೆ) ಅವರು ಪ್ರಸಕ್ತ ಸಾಲಿನ ‘ಕರ್ಮಯೋಗಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯವಹಿಸುವರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಉದ್ಘಾಟಿಸುವರು. ಸಚಿವ ಶರಣಬಸಪ್ಪ ದರ್ಶನಾಪುರ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಎಸ್.ಆರ್.ಪಾಟೀಲ ಫೌಂಡೇಷನ್ ಗೌರವಾಧ್ಯಕ್ಷೆ ಸರೋಜಿನಿದೇವಿ ಉಪಸ್ಥಿತರಿರುವರು. ಎಸ್.ಆರ್.ಪಾಟೀಲ ಫೌಂಡೇಷನ್ ಅಧ್ಯಕ್ಷ ಮನು ಬಳಿಗಾರ್ ಅಧ್ಯಕ್ಷತೆ ವಹಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.