ADVERTISEMENT

ವಿಶ್ವವಿದ್ಯಾಲಯಗಳ ಕುಲಸಚಿವರಾಗಿ ಕೆಎಎಸ್ ಅಧಿಕಾರಿಗಳು: ಡಿಸಿಎಂ ಅಶ್ವತ್ಥ ‌ನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 7:33 IST
Last Updated 24 ಫೆಬ್ರುವರಿ 2020, 7:33 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮಾತನಾಡಿದರು.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಮಾತನಾಡಿದರು.   

ಕಲಬುರ್ಗಿ: ರಾಜ್ಯದಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ‌ಬಿಗಿ ತರಲು ಕೆಎಎಸ್ ಅಧಿಕಾರಿಗಳನ್ನು ಕುಲಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ‌ನಾರಾಯಣ ಅವರು ಪ್ರಕಟಿಸಿದರು.

ಇಲ್ಲಿನ ಗುಲಬರ್ಗಾ ‌ವಿಶ್ವವಿದ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪನ್ಯಾಸಕರೇ ಇಲ್ಲಿಯವರೆಗೆ ಕುಲಸಚಿವರಾಗುತ್ತಿದ್ದರು. ಇದರಿಂದ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗುತ್ತಿತ್ತು. ಆಡಳಿತಾತ್ಮಕ ಹೊಣೆಯಿಂದ ಬಿಡುಗಡೆ ಮಾಡಿ ಪಾಠ ಪ್ರವಚನದಲ್ಲಿ ತೊಡಗಿಸುವಂತೆ ಸೂಚಿಸಲಾಗುವುದು ಎಂದರು.

ಕುಲಪತಿ ನೇಮಕ ತಿಂಗಳಲ್ಲಿ ಪೂರ್ಣ: ಎಂಟು ತಿಂಗಳಿಂದ ಗುಲಬರ್ಗಾ ‌ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಖಾಲಿ ಉಳಿದಿದ್ದು, ಮುಂದಿನ ಒಂದು ತಿಂಗಳಲ್ಲಿ ಪೂರ್ಣಪ್ರಮಾಣದ ‌ಕುಲಪತಿಯನ್ನು ನೇಮಕ ಮಾಡಲಾಗುವುದು ಎಂದು ಅಶ್ವಥ್ ನಾರಾಯಣ ಅವರು ಭರವಸೆ ‌ನೀಡಿದರು.

ADVERTISEMENT

183 ಬೋಧಕ ಹಾಗೂ 350 ಬೋಧಕೇತರ ಹುದ್ದೆಗಳು ಖಾಲಿ ಉಳಿದಿವೆ. ಎರಡು ವರ್ಷಗಳ ಹಿಂದೆ 80 ಬೋಧಕ ಹುದ್ದೆಗಳ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡಿತ್ತು. ಆದರೆ ನಂತರ ನೇಮಕ ಪ್ರಕ್ರಿಯೆಗೆ ಸೂಕ್ತ ಮಾನದಂಡಗಳನ್ನು ‌ಅನುಸರಿಸದೇ ಇದ್ದುದರಿಂದ ನನೆಗುದಿಗೆ ಬಿದ್ದಿದೆ. ಕೂಡಲೇ ಇವುಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಯಚೂರು ವಿಶ್ವವಿದ್ಯಾಲಯ ರಚನೆ ಪ್ರಸ್ತಾವವನ್ನು ಹಿಂದಿನ ಸರ್ಕಾರ ತಿರಸ್ಕರಿಸಲಾಗಿತ್ತು. ಇದೀಗ ಮತ್ತೆ ಸದನದಲ್ಲಿ ಆ ವಿಷಯ ಮಂಡಿಸಲಾಗಿದೆ. ಅಗತ್ಯವಿರುವ ‌ಸಂಪನ್ಮೂಲವನ್ನು ಒದಗಿಸಲಾಗುವುದು ಎಂದು ‌ಭರವಸೆ ನೀಡಿದರು.

ಗುಲಬರ್ಗಾ ‌ಸಂಸದ ಡಾ.ಉಮೇಶ್ ಜಾಧವ್, ಬೀದರ್ ಸಂಸದ ಭಗವಂತ ಖೂಬಾ, ಶಾಸಕರಾದ ಬಸವರಾಜ ‌ಮತ್ತಿಮೂಡ, ಡಾ.ಅವಿನಾಶ್ ‌ಜಾಧವ್, ದತ್ತಾತ್ರೇಯ ಪಾಟೀಲ, ಎಂ.ವೈ.ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ‌ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮುಖಂಡ ಶಶೀಲ್ ಜಿ.ನಮೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.