ADVERTISEMENT

ಕೆಬಿಎನ್ ದರ್ಗಾದಲ್ಲಿ ಪುರಾತನ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 4:27 IST
Last Updated 16 ಅಕ್ಟೋಬರ್ 2020, 4:27 IST
ಕಲಬುರ್ಗಿಯ ಐತಿಹಾಸಿಕ ಕೆಬಿಎನ್‌ ದರ್ಗಾದ ಬೃಹತ್ ಗೋಡೆ ಕುಸಿದಿರುವುದು
ಕಲಬುರ್ಗಿಯ ಐತಿಹಾಸಿಕ ಕೆಬಿಎನ್‌ ದರ್ಗಾದ ಬೃಹತ್ ಗೋಡೆ ಕುಸಿದಿರುವುದು   

ಕಲಬುರಗಿ: ನಗರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಇಲ್ಲಿನ ಐತಿಹಾಸಿಕ ಖಾಜಾ ಬಂದಾನವಾಜ್ ದರ್ಗಾ ಆವರಣದಲ್ಲಿ 600 ವರ್ಷಗಳ ಪುರಾತನ ಬೃಹತ್ ಗೋಡೆ ಕುಸಿದಿದೆ.

ಕೆಲ ದಿನಗಳ ಸುರಿದ ಮಳೆಗೆ ದರ್ಗಾದ ಮುಖ್ಯ ಗುಂಬಜ್‌ಗೆ ಹಾನಿಯಾಗಿತ್ತು. ಮಂಗಳವಾರದ ಮಳೆಗೆ‌ ದರ್ಗಾದ ಮುಖ್ಯಸ್ಥ ಸೈಯದ್ ಶಹಾ ಖುಸ್ರೊ ಹುಸೇನಿ ಅವರು ವಾಸವಿರುವ ಮನೆಯ ಬೃಹತ್ ಗೋಡೆ ಕುಸಿದು ಬಿದ್ದಿದೆ.

ಮುಖ್ಯ ದ್ವಾರದ ಬಲಭಾಗ ನೆಲಕ್ಕೆ ಉರುಳಿದಿದೆ. ಯಾರಿಗೂ ಅಪಾಯವಾಗಿಲ್ಲ. ದರ್ಗಾ ಮತ್ತು ಈ ಗೋಡೆಯನ್ನು 600 ವರ್ಷಗಳ ಹಿಂದೆ ಒಟ್ಟಿಗೆ ನಿರ್ಮಿಸಲಾಗಿತ್ತು. ಬಹುಮನಿ ಸಂಸ್ಥಾನದ ರಾಜ ಅಲ್ಲಾವುದ್ದೀನ್ ಬಹುಮನಿ ಕಾಲದಲ್ಲಿ ಇದನ್ನು ನಿರ್ಮಿಸಲಾಗಿದೆ ಎಂದು ದರ್ಗಾದ ಯದ್ದುಲ್ಲಾ ಹುಸೇನಿ (ನಿಜಾಮ್ ಬಾಬಾ) ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.