ಕಲಬುರ್ಗಿ: ಇಲ್ಲಿನ ಸೇವಾ ಸಂಗಮ ಸಂಸ್ಥೆಯ ವತಿಯಿಂದ ಮಂಗಳವಾರ 75 ಕಾರ್ಮಿಕರಿಗೆ ಪ್ರಾಥಮಿಕ ಚಿಕಿತ್ಸಾ ಕಿಟ್‌ಗಳನ್ನು ನೀಡಲಾಯಿತು.
ಸೇವಾ ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ವಿಕ್ಟರ್ ವಾಜ್ ಮಾತನಾಡಿ, ‘ಕೊರೊನಾ ಕಾರನದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುವುದು ಅಗತ್ಯವಾಗಿದೆ. ಸೇವಾ ಸಂಗಮವು ಕಳೆದ 15 ವರ್ಷಗಳಿಂದ ಸಮಾಜ ಸೇವೆ ಮುಂದುವರಿಸಿದೆ. ರೈತರು, ಕಿಶೋರಿಯರು, ಅಂಗವಿಕಲರು, ಶೋಷಣೆಗೆ ಒಳಪಟ್ಟವರಿಗೆ ಸಹಾಯ ಹಸ್ತ ಚಾಚಿದೆ’ ಎಂದರು.
ಕಲಬುರ್ಗಿ ಧರ್ಮಕ್ಷೇತ್ರದ ಶ್ರೇಷ್ಠ ಗುರು ಫಾದರ್ ಸ್ಟಾನಿ ಲೋಬೋ ಮಾತನಾಡಿ, ‘ನಮ್ಮ ಆರೊಗ್ಯ ನಮ್ಮ ಕೈಯಲ್ಲಿದೆ. ಬೆಳಿಗ್ಗೆ ದಿನಪತ್ರಿಕೆ ತೆರೆದು ಓದಿದರೆ ನಮ್ಮ ಆರೋಗ್ಯಕ್ಕೆ ಬೇಕಾದ ಹಲವು ಸಂಗತಿಗಳು ಸಿಗುತ್ತವೆ. ಹೊಸದಾಗಿ ಬಂದ ರೋಗಾಣುಗಳ ಬಗ್ಗೆ ಜನರು ಸರಿಯಾದ ಮಾಹಿತಿ ಪಡೆಯಬೇಕು’ ಎಂದರು.
ಇನ್‌ಹೀಲರ್, ಮಾಸ್ಕ್, ಸೈನಿಟೈಸರ್, ಆಕ್ಸಿಮೀಟರ್ ಮುಂತಾದ ಸಾಮಗ್ರಿಗಳು ಇರುವ ₹ 2 ಸಾವಿರ ಬೆಲೆಬಾಳುವ ಕಿಟ್‌ಗಳನ್ನು ಹಂಚಲಾಯಿತು.
ಸೇವಾ ಸಂಗಮ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕಿ ಸಿಸ್ಟರ್ ಅಚಲಾ, ಸಂಯೋಜಕರಾದ ಸದಾನಂದ ಸ್ವಾಮಿ, ಕಾರ್ಯಕರ್ತರು ಭಾಗವಹಿಸಿದರು. ದೀಲಿಪ ಸ್ವಾಗತಿಸಿದರು. ಚಂದ್ರಕಾಂತ ವಂದಿಸಿರು. ಅರ್ಚನಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.