
ಪ್ರಜಾವಾಣಿ ವಾರ್ತೆಚಿಂಚೋಳಿ: ಕಲಬುರಗಿ ಬೀದರ್ ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ತಾಲ್ಲೂಕಿನ ಅಶೋಕ ಅನ್ನಾರಾವ್ ಮತ್ತು ವಿಠಲ ರೆಡ್ಡಿ ಅವರ ಆಯ್ಕೆಯನ್ನು ರದ್ದುಪಡಿಸಿ ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಆದೇಶವನ್ನು ಕೆಎಟಿ ಎತ್ತಿ ಹಿಡಿದು ತಡೆಯಾಜ್ಞೆಯನ್ನು ತೆರವುಗೊಳಿಸಿದೆ ಎಂದು ದೂರುದಾರ ದೀವಾಕರರಾವ್ ಜಹಾಗೀರದಾರ ತಿಳಿಸಿದ್ದಾರೆ.
ಜಂಟಿ ನಿಬಂಧಕರ ಆದೇಶಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದಿದ್ದ ಇಬ್ಬರು ಸದಸ್ಯರು, ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಸದಸ್ಯರಾಗಿ ಮುಂದುವರಿದಿದ್ದರು. ಆದರೆ ಕೆಎಟಿ ಜ.14ರಂದು ಆದೇಶ ಹೊರಡಿಸಿ ತಡೆಯಾಜ್ಞೆ ತೆರವುಗೊಳಿಸಿದ್ದಲ್ಲದೇ ಮೇಲ್ಮನವಿ ವಜಾಗೊಳಿಸಿ ಜಂಟಿ ನಿಬಂಧಕರ ಆದೇಶ ಎತ್ತಿ ಹಿಡಿದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.