ADVERTISEMENT

ಕಟ್ಟಡ ಪರಿಶೀಲಿಸಿದ ಕೆಆರ್‌ಐಡಿಎಲ್‌ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 15:04 IST
Last Updated 29 ಡಿಸೆಂಬರ್ 2019, 15:04 IST
ಬೆಂಗಳೂರಿನಿಂದ ಬಂದಿದ್ದ ಕೆಆರ್‌ಐಡಿಎಲ್‌ ಅಧಿಕಾರಿಗಳು ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ತಂಗಾ ಅವರಿಂದ ಮಾಹಿತಿ ಪಡೆದರು
ಬೆಂಗಳೂರಿನಿಂದ ಬಂದಿದ್ದ ಕೆಆರ್‌ಐಡಿಎಲ್‌ ಅಧಿಕಾರಿಗಳು ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ತಂಗಾ ಅವರಿಂದ ಮಾಹಿತಿ ಪಡೆದರು   

ಕಲಬುರ್ಗಿ:ಇಲ್ಲಿನ ಜಿ.ಡಿ.ಎ. ಲೇಔಟ್‌ನಲ್ಲಿ ನಿರ್ಮಿಸುತ್ತಿರುವ ‘ಇಂದಿರಾಗಾಂಧಿ ನರ್ಸಿಂಗ್‌ ಮೆಟ್ರಿಕ್‌ ನಂತರ ಬಾಲಕಿಯರ ವಸತಿ ನಿಲಯ‘ದ ಕಟ್ಟಡವನ್ನುಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್‌) ಹಿರಿಯ ಅಧಿಕಾರಿಗಳ ತಂಡ ಭಾನುವಾರ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಬೆಂಗಳೂರಿನಿಂದ ಬಂದಿದ್ದ ನಿಗಮದ ಹಿರಿಯ ಎಂಜಿನಿಯರ್‌ ನೇತೃತ್ವದ ನಾಲ್ಕು ಅಧಿಕಾರಿಗಳ ವಿರುದ್ಧ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಡೆದ ಬಗ್ಗೆ ಸ್ಥಳೀಯ ಎಂಜಿನಿಯರ್‌ಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು ಎನ್ನಲಾಗಿದೆ.

ಸುಮಾರು ಒಂದು ಗಂಟೆಯವರೆಗೆ ಪರಿಶೀಲನೆ ನಡೆಸಿದ ಬಳಿಕ ಕಳಪೆಯಾಗಿರುವ ಭಾಗಗಳನ್ನು ತೆಗೆದು ಹಾಕಿ ಉತ್ತಮ ಗುಣಮಟ್ಟದ ಸಿಮೆಂಟ್, ಮರಳು ಹಾಗೂ ಬಾಗಿಲಿಗೆ ಉತ್ತಮ ಕಟ್ಟಿಗೆಯ ಬಾಗಿಲುಗಳನ್ನು ಅಳವಡಿಸುವಂತೆ ಅಧಿಕಾರಿಗಳು ಸೂಚನೆ ನೀಡಿದರು.

ADVERTISEMENT

2016ರ ನವೆಂಬರ್‌ನಿಂದ ವಸತಿ ನಿಲಯ ನಿರ್ಮಿಸಲು ಬಿಸಿಎಂ ಇಲಾಖೆ ಕೆಆರ್‌ಐಡಿಎಲ್‌ಗೆ ಗುತ್ತಿಗೆ ನೀಡಿತ್ತು. ವಸತಿ ನಿಲಯಕ್ಕೆ ನವೆಂಬರ್‌ನಲ್ಲಿ ಭೇಟಿ ನೀಡಿದ್ದ ಬಿಸಿಎಂ ಇಲಾಖೆ ಕಾರ್ಯದರ್ಶಿ ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಅಧಿಕಾರಿಗಳ ಸೂಚನೆ ಅನ್ವಯ ಜಿಲ್ಲಾ ಬಿಸಿಎಂ ಅಧಿಕಾರಿ ರಮೇಶ ತಂಗಾ ಅವರು ಕೆಆರ್‌ಐಡಿಎಲ್‌ನ ಕಲಬುರ್ಗಿ ವಿಭಾಗ 1ರಕಾರ್ಯನಿರ್ವಾಹಕ ಎಂಜಿನಿಯರ್‌ಎಲ್‌.ಧನ್ನಕುಮಾರ್‌ ಹಾಗೂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಎಲ್‌.ಜೆ.ಪಾಟೀಲ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.