ADVERTISEMENT

ನಾಯಕತ್ವ ನಿರ್ಮಾಣಕ್ಕೆ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಸ್ಪೂರ್ತಿ: ವಿಂದುಸಿಂಗ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:52 IST
Last Updated 25 ಜನವರಿ 2026, 6:52 IST
ಸೇಡಂನಲ್ಲಿ ಶುಕ್ರವಾರ ಅನ್ವೀಕ್ಷಿಕಿ ಅಧ್ಯಯನ ಕೇಂದ್ರವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ವಿದ್ಯಾ ವಿಂದುಸಿಂಗ್ ಉದ್ಘಾಟಿಸಿದರು
ಸೇಡಂನಲ್ಲಿ ಶುಕ್ರವಾರ ಅನ್ವೀಕ್ಷಿಕಿ ಅಧ್ಯಯನ ಕೇಂದ್ರವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ವಿದ್ಯಾ ವಿಂದುಸಿಂಗ್ ಉದ್ಘಾಟಿಸಿದರು   

ಸೇಡಂ: ‘ಶಿಕ್ಷಣ ಉದ್ಯೋಗಕ್ಕೆ ಮಾತ್ರ ಸೀಮತವಾಗದೇ ವ್ಯಕ್ತಿಯ ಜ್ಞಾನದ ವಿಕಸಿತಕ್ಕೆ ಕಾರಣವಾಗಬೇಕಿರುವುದು ಇಂದಿನ ಅಗತ್ಯ. ಈ ನಿಟ್ಟಿನಲ್ಲಿ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ರಾಷ್ಟ್ರ ನಾಯಕತ್ವ ನಿರ್ಮಾಣಕ್ಕೆ ಸ್ಪೂರ್ತಿಯಾಗಲಿದೆ’ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ.ವಿದ್ಯಾ ವಿಂದುಸಿಂಗ್ ಹೇಳಿದರು.

ಪಟ್ಟಣದ ಹೊರವಲಯದ ನೃಪತುಂಗ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಪರಿವರ್ತನೆಯ ಉದ್ದೇಶದಿಂದ ಪ್ರಾರಂಭಗೊಂಡ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂಕಲ್ಪ ಹಿರಿದು. ಯುವ ಶಕ್ತಿಗೆ ಹೊಸ ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿನೂತನ ಪ್ರಯೋಗ ಮಾಡುತ್ತಿದೆ. ಅನ್ವೀಕ್ಷೀಕಿ ಅಧ್ಯಯನ ಕೇಂದ್ರದ ಮೂಲಕ ರಾಷ್ಟ್ರಹಿತದ ಸಂಕಲ್ಪ ತೊಟ್ಟಿರುವ ಬಸವರಾಜ ಪಾಟೀಲ ಸೇಡಂ ಅವರ ಕಾರ್ಯ ಶ್ಲಾಘನೀಯ’ ಎಂದರು.

ADVERTISEMENT

ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಮಾತನಾಡಿ, ‘ನಾಯಕರಾಗುವರಲ್ಲಿ ಏಕಾಗ್ರತೆ, ಮಾತಿನ ಸ್ಪಷ್ಟತೆ, ನಿರ್ಧಿಷ್ಠ ಯೋಜನೆ ಮಾಡುವ ಕ್ರಿಯೆಯಲ್ಲಿ ಉತ್ಕೃಷ್ಟತೆಯ ನಾಲ್ಕು ಗುಣಗಳಿರಬೇಕು. ಇಂತಹ ಮಹತ್ವದ ವಿಚಾರಗಳನ್ನು ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ವೇದಿಕೆಯಾಗಲಿದೆ’ ಎಂದರು.

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಉದ್ಯೋಗ ಮತ್ತು ಅಂಕ ಗಳಿಗೆಯನ್ನೇ ಮೂಲ ಉದ್ದೇಶವನ್ನಾಗಿಸಿಕೊಂಡಿರುವ ಶಿಕ್ಷಣ ಸಮಿತಿಗಳ ಪ್ರಸ್ತುತ ಕಾಲಘಟ್ಟದಲ್ಲಿ, ಕೊತ್ತಲ ಬಸವೇಶ್ವರ ಭಾರತೀಯ ಸಮಿತಿ ರಾಷ್ಟ್ರ ಚಿಂತನೆಯ ಧ್ಯೇಯ ಶ್ಲಾಘನೀಯ. ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಯುವ ಸಮುದಾಯದೊಂದಿಗೆ ರಾಷ್ಟ್ರಕಟ್ಟಲು ಮುಂದಾಗುತ್ತಿದೆ. ಇದು ಸಾರ್ಥಕತೆಯ ಚಿಂತನೆಯಾಗಿದೆ’ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ರಚಿತ ಲಾಂಟರ್ನ್‌ ದಿ ವಿಂಡ್’ ಕೃತಿ ಲೋಕಾರ್ಪಣೆಗೊಳಿಸಲಾಯಿತು.

ನೊಣವಿನಕೆರೆಯ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು.

ಸಂಸ್ಥೆಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಪ್ರಾಸ್ತಾವಿಕ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಬಿ.ಜಿ ಮೂಲಿಮನಿ ಇದ್ದರು. ಪದ್ಮಾ ಶ್ರೀನಿವಾಸ ಪ್ರಾರ್ಥಿಸಿದರು. ಅಂಜನಾ ಜಡೇಕರ್ ಸ್ವಾಗತಿಸಿ, ರೇವಣಸಿದ್ದಯ್ಯ ಮಠ ನಿರೂಪಿಸಿ, ಶಾಯಿನ್ ವಂದಿಸಿದರು.

ರಾಷ್ಟ್ರ ಚಿಂತನೆಯೊಂದಿಗೆ ಅಸಾಧರಣ ವ್ಯಕ್ತಿತ್ವಗಳ ನಾಯಕತ್ವ ನಿರ್ಮಾಣದ ಸಂಕಲ್ಪದೊಂದಿಗೆ ಅನ್ವೀಕ್ಷಿಕಿ ಅಧ್ಯಯನ ಕೇಂದ್ರ ಸ್ಥಾಪನಗೊಂಡಿರುವ ಸಮಿತಿಯ ವಿನೂತನ ಹೆಮ್ಮೆ
ಬಸವರಾಜ ಪಾಟೀಲ, ಸೇಡಂ ಸಂರಕ್ಷಕ ಕೆಬಿಬಿಎಸ್ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.