ಶಹಾಬಾದ್: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ರಘು ಪವಾರ್ ಹಾಗೂ ರೇಣುಕಾ ಇವರ ವಿವಾಹ ಸರಳವಾಗಿ ನೆರವೇರಿತು.
ಸಂತೋಷ ಕೋಟದಲ್ಲಿ ಭಾಗವಹಿಸಿ ಶುಭ ಕೋರಿದ ಎಐಡಿವೈಓ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ‘ಪ್ರಜಾತಾಂತ್ರಿಕ ಹಾಗೂ ಸ್ತ್ರೀ ಪುರುಷರು ಸಮಾನರು ಎಂದು ಸಮಾಜಕ್ಕೆ ಸಂದೇಶ ನೀಡುವಂತಹ ಆದರ್ಶ ಮದುವೆ ಇದಾಗಿದೆ’ ಎಂದು ಹೇಳಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಮಾತನಾಡಿ, ‘ಇವತ್ತಿನ ಪರಿಸ್ಥಿತಿಯಲ್ಲಿ ಸರಳ ಮತ್ತು ಯಾವುದೇ ಆಡಂಬರ, ವರದಕ್ಷಿಣೆ, ಸಾಲಬಾಧೆ ಮಾಡಿಕೊಳ್ಳದೇ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡುವುದು ನಿಜವಾದ ಮದುವೆಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸವಿತಾ ಜಿಂಗಾಡೆ ಮಾತನಾಡಿ, ‘ಇಂತಹ ಮಾದರಿಯ ಮದುವೆಗಳು ಹೆಚ್ಚು ನಡೆಯಬೇಕು. ಇದಕ್ಕೆ ಪಾಲಕರು ಮತ್ತು ಸಂಬಂಧಿಕರು ಪ್ರೋತ್ಸಾಹಿಸಬೇಕು’ ಎಂದು ಹೇಳಿದರು.
ಚಿತ್ತಾಪುರ ತಾಲ್ಲೂಕು ಪತ್ರಕರ್ತದ ಸಂಘದ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ, ಗಿರಿಮಲ್ಲಪ ವಳಸಂಗ, ಬಿ.ಭಗವಾನರೆಡ್ಡಿ, ವಿ ಜಿ ದೇಸಾಯಿ, ಬಾಬು ಪವಾರ, ರವಿ ಬೊಂಬೆ, ಸತೀಶ್ ಎಂ ಜಿ, ಗುಂಡಮ್ಮ ಮಡಿವಾಳ, ಶಿಕ್ಷಕಿ ರೇವಮ್ಮ, ಜಗನ್ನಾಥ ಎಸ್ ಎಚ್, ಆರ್.ಕೆ.ವೀರಭದ್ರಪ್ಪ, ಗಣಪತರಾವ್ ಮಾನೆ, ರಾಮಣ್ಣ ಇಬ್ರಾಹಿಂಪುರ್, ರಾಘವೇಂದ್ರ ಎಂ ಜಿ, ಹಾಗೂ ನುರಾರು ಜನ ಬಂದು ಬಾಂಧವರು ಸಂತೋಷ ಕೂಟದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.