ADVERTISEMENT

ಮಾಲಗತ್ತಿ: ಜಾನುವಾರುಗಳಿಗೆ ಲಿಂಪಿಸ್ಕಿನ್ ಕಾಟ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 3:07 IST
Last Updated 18 ಸೆಪ್ಟೆಂಬರ್ 2020, 3:07 IST
ಶಹಾಬಾದ್‌ ತಾಲ್ಲೂಕಿನ ಮಾಲಗತ್ತಿ  ಗ್ರಾಮದ ಜಾನುವಾರುಗಳಲ್ಲಿ ದೇಹದ ಮೇಲೆ ಕಂಡುಬರುತ್ತಿರುವ ವಿಚಿತ್ರ ರೀತಿಯ ಗುಳ್ಳೆಗಳ ರೋಗ.
ಶಹಾಬಾದ್‌ ತಾಲ್ಲೂಕಿನ ಮಾಲಗತ್ತಿ  ಗ್ರಾಮದ ಜಾನುವಾರುಗಳಲ್ಲಿ ದೇಹದ ಮೇಲೆ ಕಂಡುಬರುತ್ತಿರುವ ವಿಚಿತ್ರ ರೀತಿಯ ಗುಳ್ಳೆಗಳ ರೋಗ.   

ಶಹಾಬಾದ್:ಸಮೀಪದ ಮಾಲಗತ್ತಿ ಗ್ರಾಮದಲ್ಲಿ ಜಾನುವಾರುಗಳಲ್ಲಿ ಲಿಂಪಿಸ್ಕಿನ್ ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕದಲ್ಲಿದ್ದಾರೆ.

ಹಲವು ದಿನಗಳಿಂದ ಗ್ರಾಮದ ಅನೇಕ ಜಾನುವಾರುಗಳ ಮೈಮೇಲೆ ಗುಳ್ಳೆಗಳು ಕಾಣಿಸಿಕೊಂಡಿವೆ. ಅಲ್ಲದೆ ಕಾಲುಗಳಲ್ಲಿ ಬಾವು ಕಂಡು ಬರುತ್ತಿದೆ. ಜಾನುವಾರುಗಳು ಆಹಾರ ಸೇವಿಸುವುದನ್ನು ನಿಲ್ಲಿಸಿವೆ. ಅಲ್ಲದೆ ಸುಸ್ತಾಗಿ ನಿಲ್ಲುತ್ತಿವೆ. ರೈತರು ರಾವೂರ ಗ್ರಾಮದ ಪಶು ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ತಿಳಿಸಿದರೆ ಜಾನುವಾರುಗಳನ್ನು ಪಶು ಆಸ್ಪತ್ರೆಗೆ ತರಲು ಹೇಳಿದ್ದಾರೆ. ಆದರೆ ಜಾನುವಾರುಗಳನ್ನು ದೂರದವರೆಗೆ ಹೇಗೆ ತೆಗೆದುಕೊಂಡು ಹೋಗುವುದು ಎಂಬ ಚಿಂತೆ ರೈತರದ್ದಾಗಿದೆ.

ಜಾನುವಾರುಗಳನ್ನು ತೆಗೆದುಕೊಂಡು ಹೋಗುವ ಬದಲು ಜೀವಣಗಿ ಗ್ರಾಮದ ಪಶು ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಿದ್ದಾರೆ. ಈ ರೋಗಕ್ಕೆ ಔಷಧಿಯಿಲ್ಲ. ಇದೊಂದುಸಾಂಕ್ರಾಮಿಕ ರೋಗ ಎಂದು ಹೇಳಿದ್ದಾರೆ ಎಂದು ಗ್ರಾಮದ ರೈತರು ತಿಳಿಸಿದ್ದಾರೆ.

ADVERTISEMENT

ಗ್ರಾಮದ ಜಾನುವಾರುಗಳಿಗೆ ಯಾವುದೇ ರೋಗ ಬಂದರೂ ರಾವೂರ ಗ್ರಾಮದ ಪಶು ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಆದ್ದರಿಂದ ನಮ್ಮ ಗ್ರಾಮದಲ್ಲೇ ಪಶು ಆಸ್ಪತ್ರೆಯನ್ನು ಸ್ಥಾಪಿಸಬೇಕು. ಈ ಕುರಿತು ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಸಿದ್ದು ಅಲ್ಲೂರ್ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.