ADVERTISEMENT

ಕಮಲಾಪುರ: ಶಿವಲಿಂಗಕ್ಕೆ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 3:48 IST
Last Updated 2 ಮಾರ್ಚ್ 2022, 3:48 IST
ಕಮಲಾಪುರ ಪಟ್ಟಣದ ನಗರೇಶ್ವರ ದೇವಾಲಯದ ಶಿವ ಮೂರ್ತಿಗೆ ಮಂಗಳವಾರ ಮಹಿಳೆಯರು ಪೂಜೆ ಸಲ್ಲಿಸಿದರು
ಕಮಲಾಪುರ ಪಟ್ಟಣದ ನಗರೇಶ್ವರ ದೇವಾಲಯದ ಶಿವ ಮೂರ್ತಿಗೆ ಮಂಗಳವಾರ ಮಹಿಳೆಯರು ಪೂಜೆ ಸಲ್ಲಿಸಿದರು   

ಕಮಲಾಪುರ: ಮಹಾಶಿವರಾತ್ರಿ ನಿಮಿತ್ತ ಮಂಗಳವಾರ ಪಟ್ಟಣದ ನಗರೇಶ್ವರ ದೇವಾಲಯದ ಶಿವಲಿಂಗಕ್ಕೆ ಭಕ್ತರು ಪೂಜೆ ಸಲ್ಲಿಸಿದರು.

ಬಡಾವಣೆಯ ಮಹಿಳೆಯರೆಲ್ಲ ಸೇರಿ ಬೆಳಿಗ್ಗೆ ದೇವಾಲಯ ಸ್ವಚ್ಛಗೊಳಿಸಿದರು. ಮಧ್ಯಾಹ್ನದಿಂದ ಶಿವನಾಮ ಸ್ಮರಣೆ ಮಾಡುತ್ತ ಸಂಜೆ ಶಿವಮೂರ್ತಿಗೆ ಅಭಿಷೇಕ ಮಾಡಿ ಪೂಜೆ ಮಾಡಲಾಯಿತು.

ನಗರೇಶ್ವರ ದೇವಾಲಯ ಪೂರಾತನ ಕುರುಹಾಗಿದೆ. ಅವಾಸನದ ಅಂಚಿನಲ್ಲಿದ್ದ ಈ ದೇವಾಲಯವನ್ನು ಕೆಲ ವರ್ಷಗಳ ಹಿಂದೆ ನವನಿಹಾಳದ ಈಶ್ವರಲಿಂಗ ಮುತ್ಯ ತಮ್ಮ ಸ್ವಂತ ಖರ್ಚಿನಲ್ಲಿ ಜೀರ್ಣೋಧ್ದಾರಗೊಳಿಸಿದರು. ಅವರು ಲಿಂಗೈಕ್ಯರಾದ ಬಳಿಕ ಮತ್ತೆ ಈ ದೇವಾಲಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಮೂಲ ಸೌಕರ್ಯಗಳಿಲ್ಲ. ಶಾಸಕರು ಈ ದೇವಲಾಯಕ್ಕೆ ಸೂಕ್ತ ಅನುದಾನ ನೀಡು ಅಭಿವೃದ್ಧಿ ಪಡಿಸಬೇಕು ಎಂದು ನಿವೃತ್ತ ಶಿಕ್ಷಕಿ ರಾಚಮ್ಮ ಬಮ್ಮಣ್ಣ ಒತ್ತಾಯಿಸಿದ್ದಾರೆ.

ADVERTISEMENT

ರಾಜಮತಿ ಹುಣಚಿಗಿಡ, ಪಾರ್ವತಿ ಗೌಡಗೋಳ, ಜಗದೇವಿ ಉಡಬಾಳ, ಶೈಲಜಾ ಕೋಡಿಮಠ್‌, ಇಂದುಬಾಯಿ ರತ್ನಾಕರ್‌, ರೇಣುಕಾ ಮೂಲಿಮನಿ, ಸತ್ಯವತಿ, ಅಣ್ಣಪ್ಪ ಮಹಾಜನ್‌, ರೋಮಣ್ಣ ಬಮ್ಮಣ, ರೇವಣಸಿದ್ದಪ್ಪ ಹುಣಚಿಗಿಡ, ನಾಗರಾಜ ಹುಣಚಿಗಿಡ, ತೀರ್ಥ ಮೂಲಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.