ADVERTISEMENT

ಎರಡನೇ ದಿನವೂ ಮಳಖೇಡ ಸೇತುವೆ ಬಂದ್

ಸೇಡಂ: ತೊಂದರೆ ಅನುಭವಿಸಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 2:52 IST
Last Updated 18 ಸೆಪ್ಟೆಂಬರ್ 2020, 2:52 IST
ಕಲಬುರ್ಗಿ-ಸೇಡಂ ಸಂಪರ್ಕ ಕಲ್ಪಿಸುವ ಕಾಗಿಣಾ ನದಿಯ ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿರುವುದು
ಕಲಬುರ್ಗಿ-ಸೇಡಂ ಸಂಪರ್ಕ ಕಲ್ಪಿಸುವ ಕಾಗಿಣಾ ನದಿಯ ಮಳಖೇಡ ಸೇತುವೆ ಮೇಲೆ ನೀರು ಹರಿಯುತ್ತಿರುವುದು   

ಸೇಡಂ: ಮಳಖೇಡ ಬಳಿ ಕಾಗಿಣಾ ನದಿ ಸೇತುವೆ ಮೇಲೆ ಎರಡನೇ ದಿನವೂ ನೀರು ಹರಿಯುತ್ತಿದ್ದುದರಿಂದ ಕಲ್ಬುರ್ಗಿ– ಸೇಡಂ ನಡುವೆ ಗುರುವಾರವೂ ಸಂಪರ್ಕ ಕಡಿತಗೊಂಡಿತ್ತು.

ಇದರಿಂದಾಗಿ ಅನೇಕ ಪ್ರಯಾಣಿಕರು ಹಾಗೂ ಸರ್ಕಾರಿ ನೌಕರರು ತೊಂದರೆ ಅನುಭವಿಸಿದರು.

ಬುಧವಾರ ಸಂಜೆ ಸ್ವಲ್ಪ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಬುಧವಾರ ರಾತ್ರಿ ನೀರು ಹರಿದು ಬಂದ ಪರಿಣಾಮ ರಾತ್ರಿಯಿಂದ ಗುರುವಾರ ರಾತ್ರಿಯವರೆಗೂ ಸಂಪರ್ಕ ಸ್ಥಗಿತಗೊಂಡಿತ್ತು. ಲಾರಿ, ಬಸ್‌ಗಳು ಚಿತ್ತಾಪುರ, ರಾವೂರ ಮಾರ್ಗವಾಗಿ ಕಲಬುರ್ಗಿಗೆ ತೆರಳಿದವು. ನದಿ ನೀರಿನ ಆರ್ಭಟ ಹೆಚ್ಚಿರುವುದರಿಂದ ನದಿ ದಂಡೆಯ ಹೊಲಗಳಿಗೆ ನೀರು ನುಗ್ಗಿದೆ. ರೈತರು ಸಂಕಷ್ಟ ಎದುರಿಸುವಂತಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.