ADVERTISEMENT

ಕಲಬುರಗಿ: ಹಲ್ಲೆ ಆರೋಪಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 4:47 IST
Last Updated 17 ಆಗಸ್ಟ್ 2022, 4:47 IST

ಕಲಬುರಗಿ: ನೆರೆ ಮನೆಯವರ ಜೊತೆಗೆ ಜಗಳವಾಡಿ, ಮಾರಣಾಂತಿಕವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದ ಆರೋಪಿಗೆ 3 ವರ್ಷ 4 ತಿಂಗಳು ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ 2ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ನೇಸರಗಿ ತೀರ್ಪು ನೀಡಿದ್ದಾರೆ.

ನಗರದ ನಿವಾಸಿ ರಾಜಕುಮಾರ ಗೋವನ ಶಿಕ್ಷಗೆ ಒಳಗಾದ ಆರೋಪಿ. ವಕೀಲರಾದ ಜಯಶ್ರೀ ಅವರು ದೂರುದಾರರ ಪರವಾಗಿ ವಾದ ಮಂಡಿಸಿದರು.

2020ರ ಫೆಬ್ರವರಿ 13ರಂದು ರಾಜಕುಮಾರ ಎಂಬಾತ ತಮ್ಮ ಮನೆಯ ಗೋಡೆಗೆ ಮೆಟ್ಟಿಲು ತಾಗುತ್ತಿದೆ ಎಂದು ಕಟ್ಟಿಗೆಯಿಂದ ಹಲ್ಲೆ ಮಾಡಿದ್ದ. ಜತೆಗ ಅವಾಚ್ಯ ಪದಗಳಿಂದ ನಿಂದಿಸಿದ್ದ ಎಂದು ಆರೋಪಿಸಿ ಹಲ್ಲೆಗೆ ಒಳಗಾದ ಪಕ್ಕದ ಮನೆಯ ನಿವಾಸಿ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.