ಕಲಬುರ್ಗಿ: ಜನವರಿ 3ರಂದು ನಡೆಯಲಿರುವ ಮಗಳ ಮದುವೆಗಾಗಿ ತಂದಿಟ್ಟಿದ್ದ ₹ 2 ಲಕ್ಷ ಮೌಲ್ಯದ ಬಟ್ಟೆಗಳು, ಪಾತ್ರೆಗಳು ಹಾಗೂ ದಿನಸಿ ವಸ್ತುಗಳನ್ನು ಕಳ್ಳರು ಇಲ್ಲಿನ ಎನ್‌ಜಿಒ ಕಾಲೊನಿಯ ಮನೆಯಲ್ಲಿ ಸೋಮವಾರ ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಇದರಿಂದ ಕಂಗಾಲಾದ ಕುಟುಂಬ ಕಣ್ಣೀರಿಡುತ್ತಿದೆ. ಶಂಕರರಾವ್–ಉಮಾ ಕುಲಕರ್ಣಿ ದಂಪತಿಯ ಪುತ್ರಿ ಪ್ರಿಯಾ ಅವರ ವಿವಾಹ ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಮನ್ನಾ ಎಖೆಳ್ಳಿ ಗ್ರಾಮದ ಅನಿರುದ್ಧ ಅವರೊಂದಿಗೆ ನಡೆಯಲಿದೆ. ಅದಕ್ಕಾಗಿ ಮುಂಚೆಯೇ ದಿನಸಿ, ಬಟ್ಟೆ, ಪಾತ್ರೆಗಳನ್ನು ಖರೀದಿಸಿ ಮನೆಯಲ್ಲಿ ಇರಿಸಲಾಗಿತ್ತು. ಶಂಕರರಾವ್ ಅವರು ಇನ್ನೊಂದು ಮನೆಯಲ್ಲಿ ವಾಸವಾಗಿದ್ದರು. ಮಂಗಳವಾರ ಬೆಳಿಗ್ಗೆ ಬಂದು ನೋಡಿದಾಗ ವಸ್ತುಗಳೆಲ್ಲ ಕಳ್ಳತನವಾಗಿದ್ದವು.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.