ADVERTISEMENT

ಹೋರಾಟಗಾರ ದಿ.ಮಾನಪಡೆ ಜನ್ಮದಿನ; ಅನ್ನಸಂತರ್ಪಣೆ, ನೋಟ್ ಬುಕ್ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 15:27 IST
Last Updated 1 ಜೂನ್ 2025, 15:27 IST
ಕಲಬುರಗಿಯಲ್ಲಿ ಭಾನುವಾರ ಹೋರಾಟಗಾರ ದಿ.ಮಾರುತಿ ಮಾನಪಡೆ ಜನ್ಮದಿನದ ಅಂಗವಾಗಿ ಅವರ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು
ಕಲಬುರಗಿಯಲ್ಲಿ ಭಾನುವಾರ ಹೋರಾಟಗಾರ ದಿ.ಮಾರುತಿ ಮಾನಪಡೆ ಜನ್ಮದಿನದ ಅಂಗವಾಗಿ ಅವರ ಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು   

ಕಲಬುರಗಿ: ಕಾರ್ಮಿಕರ ಹೋರಾಟಗಾರ ದಿ.ಮಾರುತಿ ಮಾನಪಡೆ ಅವರ 70ನೇ ಜನ್ಮ ದಿನದ ಅಂಗವಾಗಿ ಮಾರುತಿ ಮಾನಪಡೆ ಹಿತೈಷಿಗಳು, ಅಭಿಮಾನಿಗಳ ಬಳಗ, ನೀರು ಸರಬರಾಜು ಹೊರಗುತ್ತಿಗೆ ನೌಕರರ ಸಂಘ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಅಂಬಲಗಾ ಗ್ರಾಮದ ಮಾರುತಿ ಮಾನಪಡೆ ಸಮಾಧಿ ಸ್ಥಳದಲ್ಲಿ ವಿಶೇಷ ಪೂಜೆ ನಡೆಯಿತು. ಕಮಲಾಪುರ ಕಸಾಪ ಅಧ್ಯಕ್ಷ ಸುರೇಶ ಲೇಂಗಟಿ, ಭೀಮಶಾ ದಂಡಗುಲಕರ್, ಬಸವರಾಜ ಸರಡಗಿ, ಸೋಮಶೇಖರ್ ಸಿಂಗೆ, ಬಂಡಯ್ಯ ಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.

ನಗರದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲೂ ಬಡವರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಘಾಟಗೆ ಬಡಾವಣೆಯ ಶಿವಾಜಿ ಪಾರ್ಕ್ ಬಳಿಯ ವೃದ್ಧಾಶ್ರಮದಲ್ಲಿ ಅನ್ನ ಸಂತರ್ಪಣೆ ಜರುಗಿತು. ಮುಖಂಡರಾದ ಶಾಂತಪ್ಪ ಪಾಟೀಲ, ರಾಘವೇಂದ್ರ ಅವರಾದಕರ್, ಪ್ರಕಾಶ ಬಬಲಾದಕರ್, ಶಿವಕುಮಾರ ಮರ್ತೂರಕರ್‌ ಇದ್ದರು.

ADVERTISEMENT

ನೃಪತುಂಗ ಕಾಲೊನಿಯ ಬಳಿಯ ಬುಡ್ಗ ಜಂಗಮ ಕಾಲೊನಿಯಲ್ಲಿ ಸುಮಾರು 400 ಮಕ್ಕಳಿಗೆ ನೋಟ್ ಬುಕ್ ಹಾಗೂ ಪೆನ್ ವಿತರಿಸಲಾಯಿತು. ಪತ್ರಕರ್ತ ಶಿವರಂಜನ ಸತ್ಯಂಪೇಟೆ, ವಿಠ್ಠಲ ಚಿಕಣಿ, ಪತ್ರಕರ್ತ ಚಂದ್ರಶೇಖರ ಕವಲಗಾ, ಸಂಜುಕುಮಾರ್ ಕಾಂಬಳೆ, ಸಾಮಾಜಿಕ ಕಾರ್ಯಕರ್ತ ಮೈಲಾರಿ ದೊಡ್ಡಮನಿ, ಮಹೇಶ ಚೌಕಿಮಠ, ಪುಂಡಲೀಕ ಮೋಸಲಗಿ ಇದ್ದರು.

ಕಮಲಾಪುರದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ಕಾರ್ಯಕ್ರಮ ನಡೆದ ಕಾರ್ಯಕ್ರಮದಲ್ಲಿ ರೇವಪ್ಪ ಓಕಳಿ, ದುರ್ಗಪ್ಪ ಚೇಂಗಟಾ, ಸುಭಾಷ ಹೊಸಮನಿ, ಚಿದಾನಂದ ಸೋಂತ, ರಮೇಶ ರಾಠೋಡ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.