ಕಲಬುರಗಿಯ ಮಹಾದೇವಿ ನಂದಿಕೋಲಮಠ 33 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದ್ದರು. ಹಸಿವು ತಾಳಲಾರದೆ ತಾವು ಕೆಲಸ ಮಾಡುತ್ತಿದ್ದ ಮನೆಯಿಂದ ಒಂದು ರೊಟ್ಟಿಯನ್ನು ತೆಗೆದುಕೊಂಡಾಗ, ಕಳ್ಳಿ ಎಂಬ ಆರೋಪವನ್ನೂ ಅವರ ಮೇಲೆ ಹೊರಿಸಲಾಯಿತು. ಆ ಅವಮಾನವನ್ನು ಛಲವಾಗಿ ತೆಗೆದುಕೊಂಡ ಅವರು ಇಂದು ಹಲವರಿಗೆ ಉದ್ಯೋಗದಾತೆಯಾಗಿದ್ದಾರೆ. ರೊಟ್ಟಿ ಉದ್ಯಮದಲ್ಲಿ ಅವರ ಯಶೋಗಾಥೆ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.