ADVERTISEMENT

ಮೆಹ್ತಾ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಕೂಟಕ್ಕೆ ಚಾಲನೆ ನೀಡಿದ ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 16:13 IST
Last Updated 29 ನವೆಂಬರ್ 2019, 16:13 IST
ಕಲಬುರ್ಗಿಯ ಎಸ್‌ಆರ್‌ಎನ್‌ ಮೆಹ್ತಾ ಸಿಬಿಎಸ್‌ಯ ಶಾಲೆಯಲ್ಲಿ ಶುಕ್ರವಾರ ಆರಂಭವಾದ ಕ್ರೀಡಾಕೂಟದ ಅಂಗವಾಗಿ ಮಕ್ಕಳು ನಡೆಸಿದ ಕಸರತ್ತು
ಕಲಬುರ್ಗಿಯ ಎಸ್‌ಆರ್‌ಎನ್‌ ಮೆಹ್ತಾ ಸಿಬಿಎಸ್‌ಯ ಶಾಲೆಯಲ್ಲಿ ಶುಕ್ರವಾರ ಆರಂಭವಾದ ಕ್ರೀಡಾಕೂಟದ ಅಂಗವಾಗಿ ಮಕ್ಕಳು ನಡೆಸಿದ ಕಸರತ್ತು   

ಕಲಬುರ್ಗಿ: ನಗರದ ಎಸ್ಆರ್‌ಎನ್‌ ಮೆಹ್ತಾ ಸಿಬಿಎಸ್‌ಇ ಶಾಲೆಯಲ್ಲಿ ಶುಕ್ರವಾರನಡೆದ 4ನೇ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ಚಾಲನೆ ನೀಡಿದರು.

ನಂತರ ಮಾತನಾಡಿದ ಯಡಾ ಮಾರ್ಟಿನ್, ‘ಮಕ್ಕಳು ಈಗಿನಿಂದಲೇ ಉದಾತ್ತ ಗುರಿಯನ್ನು ಇಟ್ಟುಕೊಳ್ಳಬೇಕು. ನೀವು ವಾಸಿಸುವ ನಗರ, ರಾಜ್ಯ, ದೇಶದ ಬದಲಾವಣೆಗೆ‍ಪ್ರಯತ್ನಿಸಬೇಕು. ಐಪಿಎಸ್‌ ಮಾಡಿದರೆ ಪೊಲೀಸ್‌ ಅಧಿಕಾರಿಯಾಗಿ ಸಮಾಜದಲ್ಲಿ ಉತ್ತಮ ಕೆಲಸ ಮಾಡಲು ಸಾಧ್ಯವಾಗುತ್ತದೆ. ಈಗನಿಂದಲೇ ಕಠಿಣ ಓದನ್ನು ರೂಢಿಸಿಕೊಳ್ಳಬೇಕು. ದೇಹ ದಣಿಯುವಂತೆ ಆಟವಾಡಬೇಕು. ಅಂದುಕೊಂಡ ಗುರಿಯನ್ನು ಸಾಧಿಸಲು ಸದಾ ಪ್ರಯತ್ನಿಸಬೇಕು’ ಎಂದರು.

ಶಾಲಾ ಆಡಳಿತ ಮಂಡಳಿಯ ಮ್ಯಾನೇಜಿಂಗ್‌ ಟ್ರಸ್ಟಿ ಚಕೋರ್‌ ಮೆಹ್ತಾ, ಪ್ರಾಂಶುಪಾಲ ರಾಜಶೇಖರ ರೆಡ್ಡಿ ಇದ್ದರು.

ADVERTISEMENT

ಕ್ರೀಡಾಕೂಟದ 6ನೇ ತರಗತಿ ವಿದ್ಯಾರ್ಥಿಗಳು ಮಾನವ ಪಿರಮಿಡ್‌ ರಚಿಸಿ ಗಮನ ಸೆಳೆದರು. ಡಿಸೆಂಬರ್‌ 1ರವರೆಗೆ ಕ್ರೀಡಾಕೂಟ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.