ADVERTISEMENT

ಯುವಜನ ಸಬಲೀಕರಣ ನಿಗಮ ಸ್ಥಾಪಿಸಿ; ಅಖಿಲ ಭಾರತ ಯುವಜನ ಫೆಡರೇನ್ ಒತ್ತಾಯ

ರಾಜ್ಯ ಸರ್ಕಾರಕ್ಕೆ ಅಖಿಲ ಭಾರತ ಯುವಜನ ಫೆಡರೇನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 16:10 IST
Last Updated 22 ನವೆಂಬರ್ 2020, 16:10 IST
ಯುವಜನರ ಸಬಲೀಕರಣ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿಯಲ್ಲಿ ಶನಿವಾರ ಅಖಿಲ ಭಾರತ ಯುವಜನ ಫೆಡರೇನ್ ಮುಖಂಡರು ಮನವಿ ಸಲ್ಲಿಸಿದರು
ಯುವಜನರ ಸಬಲೀಕರಣ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿ ಕಲಬುರ್ಗಿಯಲ್ಲಿ ಶನಿವಾರ ಅಖಿಲ ಭಾರತ ಯುವಜನ ಫೆಡರೇನ್ ಮುಖಂಡರು ಮನವಿ ಸಲ್ಲಿಸಿದರು   

ಕಲಬುರ್ಗಿ: ‘ರಾಜ್ಯದಲ್ಲಿ ಸುಮಾರು 1.80 ಕೋಟಿ ಯುವಜರಿದ್ದಾರೆ. ಅವರ ಅಭಿವೃದ್ಧಿಯು ರಾಜ್ಯ ಮತ್ತು ದೇಶದ ಅಭಿವೃದ್ಧಿ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ. ಹಾಗಾಗಿ, ಯುವಜನರ ಸಬಲೀಕರಣ ನಿಗಮ ಸ್ಥಾಪಿಸಬೇಕು’ ಎಂದು ಅಖಿಲ ಭಾರತ ಯುವಜನ ಫೆಡರೇನ್ ಒತ್ತಾಯಿಸಿದೆ.

ರಾಜ್ಯ ಸರ್ಕಾರ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ನಿಗಮ ಸೇರಿದಂತೆ ಒಂದು ಪ್ರಾಧಿಕಾರವನ್ನು ರಚಿಸಲು ಆದೇಶಿಸಿದೆ. ಮತ್ತಷ್ಟು ನಿಗಮಗಳನ್ನು ಸ್ಥಾಪಿಸುವಂತೆ ರಾಜ್ಯದ ನಾನಾ ಭಾಗಗಳಿಂದ ಒತ್ತಾಯಗಳು ಕೇಳಿ ಬರುತ್ತಿವೆ. ಪ್ರತಿಯೊಂದು ಜಾತಿ, ಧರ್ಮಗಳಿಗೆ ತೆರೆಯುತ್ತಿರುವ ನಿಗಮ ಮತ್ತು ಪ್ರಾಧಿಕಾರಗಳಿಂದ ರಾಜ್ಯದ ಯುವಜನರಿಗೆ ಯಾವ ರೀತಿಯಾದ ಉಪಯೋಗವೂ ಇಲ್ಲ. ಕೊರೊನಾ ಸಂದರ್ಭದಲ್ಲಿ ರಾಜ್ಯದ ಯುವಜನರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗಂಭೀರವಾಗಿದ್ದು, ಬದುಕಿನ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬದಕು ಕಟ್ಟಿಕೊಳ್ಳಲು ನೆರವಾಗಬೇಕಾದ್ದು, ಸರ್ಕಾರದ ಮೊದಲ ಆದ್ಯತೆ ಆಗಬೇಕು’ ಎಂದೂ ಕೋರಿದ್ದಾರೆ.

ಯುವಜನರ ಏಳ್ಗೆಯ ದೃಷ್ಟಿಯಿಂದ ಸರ್ಕಾರ ಯುವಜನ ಸಬಲೀಕರಣ ನಿಗಮ ಸ್ಥಾಪಿಸಿ ಆ ಮೂಲಕ ಅವರ ಬದುಕಿಗೆ ಪೂರಕವಾಗುವ ಶಿಕ್ಷಣ, ಉದ್ಯೋಗದ ಯೋಜನೆಗಳು ರೂಪಿಸಬೇಕು. ಈ ಹಿಂದೆ 2012ರಲ್ಲಿ ಅಂದಿನ ರಾಜ್ಯ ಸರ್ಕಾರ ‘ಸ್ವಾಮಿ ವಿವೇಕಾನಂದ ಯುವ ಸಬಲೀಕರಣ ನಿಗಮ’ ಸ್ಥಾಪಿಸಲು ಶಿಫಾರಸು ಮಾಡಿತ್ತು. ಅದಕ್ಕೆ ಅನುಗುಣವಾಗಿ 2013ರಲ್ಲಿ ಅಂದಿನ ಬಿಜೆಪಿ ನೇತೃತ್ವದ ಸರ್ಕಾರ 2013ರ ಡಿಸೆಬಂರ್ 30ರಂದು ಸಚಿವ ಸಂಪುಟದ ಸಭೆ ನಡೆಸಿ ರಾಜ್ಯದಲ್ಲಿ ಯುವಜನ ಅಭಿವೃದ್ದಿಗಾಗಿ ಯುವ ಸಬಲೀಕರಣ ನಿಗಮದ ಅವಶ್ಯಕತೆ ಇದ್ದುದನ್ನು ಮನಗೊಂಡು, ಈ ಕುರಿತು ಚರ್ಚಿಸಿ ಒಪ್ಪಿಗೆಯನ್ನು ನೀಡಲಾಗಿತ್ತು. ಆದರೆ, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ಬೀಡಲಾಗಿತ್ತು. ಅವರ ನಿರ್ಲಕ್ಷ್ಯದಿಂದಾಗಿ ಈ ವಿಚಾರ ಶಿಲ್ಕು ಬಿದ್ದಿದೆ. ಸರ್ಕಾರದ ಅವಧಿಯು ಪೂರ್ಣಗೊಂಡು ಯುವಜನ ಸಬಲೀಕರಣದ ನಿಗಮ ಸ್ಥಾಪನೆಯ ವಿಷಯ ಅಲ್ಲಿಗೆ ಸ್ಥಗಿತವಾಗಿದೆ’ ಎಂದೂ ಮನವಿಯಲ್ಲಿ ತಿಳಿಸಿದ್ದಾರೆ.

ADVERTISEMENT

‘ರಾಜ್ಯ ಸರ್ಕಾರ ಈಗ ರಚಿಸುತ್ತಿರುವ ಪ್ರಾಧಿಕಾರ ಮತ್ತು ನಿಗಮ ಮಂಡಳಿಗಳು ಕೇವಲ ಒಂದು ಜಾತಿ, ಧರ್ಮಕ್ಕೆ ಸಿಮೀತವಾದವು. ಆದರೂ ಆ ಸಮುದಾಯದ ಪ್ರಬಲರ ಹಿತಾಸಕ್ತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ. ಇಂಥವುಗಳಿಂದ ಆ ಸಮುದಾಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಎಳ್ಳಷ್ಟೂ ಪ್ರಯೋಜನವಿಲ್ಲ. ಸರ್ಕಾರವು ಎಲ್ಲ ಧರ್ಮ, ಜಾತಿ ಮತ್ತು ಯುವಜನರ ಏಳ್ಗೆಗೆ ಶ್ರಮಿಸುವ ಯುವ ಸಬಲೀಕರಣ ರಚಿಸಿ, ಯುವಜನ ಕೇಂದ್ರಿತವಾದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ರೂಪಿಸಬೇಕು’ ಎಂದೂ ಕೋರಿದ್ದಾರೆ.

ಫೆಡರೇಷನ್‌ ಮುಖಂಡರದ ಹಣಮಂತರಾಯ ಎಸ್. ಅಟ್ಟೂರ, ಮಲಕಾರಿ ಪೂಜಾರಿ, ಪದ್ಮಾವತಿ ಮಾಲಿಪಾಟೀಲ, ರಘುನಂದನ ಕುಲಕರ್ಣಿ, ಆನಂದ ಖೇಳಗಿ, ಬಸವರಾಜ ತೆಂಗಳಿ, ನಾಗಲಿಂಗ ವಿಶ್ವಕರ್ಮ, ಮಹೇಶ ತೇಲಕುಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.