ADVERTISEMENT

‘ಅಣಕು ಯುವ ಸಂಸತ್ತು’ ನಾಳೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 12:53 IST
Last Updated 17 ಜನವರಿ 2019, 12:53 IST

ಕಲಬುರ್ಗಿ: ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ನಗರದ ಚಾಂದ ಬೀ ಬೀ ಮಹಿಳಾ ಬಿ.ಇಡಿ ಕಾಲೇಜಿನಲ್ಲಿ ಜ.19ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಮಟ್ಟದ ‘ಅಣಕು ಯುವ ಸಂಸತ್ತು’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯ ವಿಷಯಗಳು: ನೇರ ಸಂದರ್ಶನದಲ್ಲಿ ಚರ್ಚಿಸುವ ವಿಷಯಗಳು ಸಾಮಾಜಿಕ ಹಾಗೂ ಆರ್ಥಿಕ ಸಶಕ್ತೀಕರಣ, ಮಹಿಳಾ ಸಶಕ್ತೀಕರಣ, ನಾಗರಿಕರ ಜೀವನ ಸರಳೀಕರಣಗೊಳಿಸುವುದು, ಭ್ರಷ್ಟಾಚಾರ ನಿರ್ಮೂಲನೆ.

ಡಿಜಿಟಲ್ ಸ್ಕ್ರೀನಿಂಗ್ ವಿಷಯಗಳು: ಸ್ವಚ್ಛತೆ, ಆಯುಷ್ಮಾನ ಭಾರತ, ಬಡತನ ವಿವಾರಣೆ ಮತ್ತು ಕೃಷಿ ಆದಾಯ ಹೆಚ್ಚಳ. ಇವುಗಳಲ್ಲಿ ಯಾವುದಾದರು ಒಂದು ವಿಷಯವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

ADVERTISEMENT

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದವರು ರಾಜ್ಯ ಮಟ್ಟಕ್ಕೆ ಹಾಗೂ ಇದರಲ್ಲಿ ಆಯ್ಕೆಯಾದವರು ರಾಷ್ಟ್ರಮಟ್ಟಕ್ಕೆ ಆಯ್ಕಯೆಯಾಗುತ್ತಾರೆ. ನೇರ ಸಂದರ್ಶನದಲ್ಲಿ 2-3 ನಿಮಿಷದೊಳಗೆ ಕನ್ನಡ, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಬಹುದು. ಡಿಜಿಟಲ್ ವಿಭಾಗದ ಸ್ಪರ್ಧಾಳುಗಳು ತಮ್ಮ ಭಾಷಣವನ್ನು ಮೊಬೈಲ್‌ನಲ್ಲಿ ವಿಡಿಯೊ ರೆಕಾರ್ಡ್‌ ಮಾಡಿ ಯು ಟೂಬ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಮತ್ತು innovate.mygov.in/youth-parliament ಗೆ ಲಿಂಕ್‌ ಮಾಡಬೇಕು.

ಆಸಕ್ತರು ಜಿಲ್ಲಾ ನೋಡಲ್ ಅಧಿಕಾರಿ ಡಾ. ಶಂಕ್ರಪ್ಪ ಬಳಿ ಅವರಲ್ಲಿ ಜ.19ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾ ಯುವ ಸಮನ್ವಯ ಅಧಿಕಾರಿ ಡಿ.ದಯಾನಂದ ತಿಳಿಸಿದ್ದಾರೆ.

ಮಾಹಿತಿಗೆ 08472-248528, 99027 81815, 98457 89547, 91485 46355 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.