ADVERTISEMENT

ಕಲಬುರ್ಗಿ: ಚಿಂಚೋಳಿ ಸುತ್ತ ಲಘು ಭೂಕಂಪ, ಮನೆಯಿಂದ ಹೊರಗೆ ಓಡಿಬಂದ ಜನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 4:31 IST
Last Updated 8 ಅಕ್ಟೋಬರ್ 2021, 4:31 IST
ಗಡಿಕೇಶ್ವಾರ ಗ್ರಾಮದ ಹೆಬ್ಬಾಗಿಲು (ಸಾಂದರ್ಭಿಕ ಚಿತ್ರ)
ಗಡಿಕೇಶ್ವಾರ ಗ್ರಾಮದ ಹೆಬ್ಬಾಗಿಲು (ಸಾಂದರ್ಭಿಕ ಚಿತ್ರ)   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಗಡಿಕೇಶ್ವಾರ, ತೇಗಲತಿಪ್ಪಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ತಡರಾತ್ರಿ ಮತ್ತೆ ಲಘು ಭೂಕಂಪದ ಅನುಭವವಾಗಿದೆ.

ರಾತ್ರಿ 1 ಗಂಟೆಯ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದರು.

ಗಡಿಕೇಶ್ವಾರ ಗ್ರಾಮದಲ್ಲಿ ಪದೇಪದೇ ಭೂಮಿಯಿಂದ ಭಾರಿ ಪ್ರಮಾಣದ ಸ್ಫೋಟಕ ಸದ್ದು ಕೇಳಿಬರುವುದು ಸಾಮಾನ್ಯವಾಗಿದೆ. ಈ ಸದ್ದು ಪದೇಪದೇ ಜನರ ನಿದ್ದೆಗೆಡಿಸುತ್ತಿದೆ. ಇದರೊಂದಿಗೆ ಈಗ ಭೂಮಿ ಕಂಪಿಸಿದ್ದಕ್ಕೆ ಜನ ಭಯಭೀತರಾದರು. ಹಲವರು ಮನೆಯ ಹೊರಗೆ ಮಲಗಿ ರಾತ್ರಿ ಕಳೆದರು.

ADVERTISEMENT

ತಿಂಗಳ ಹಿಂದೆ ಕೂಡ ತೆಲಂಗಾಣ ಗಡಿಯಲ್ಲಿ ಸಂಭವಿಸಿದ ಭೂಕಂಪದ ಕಾರಣ ಕಲಬುರಗಿ ಜಿಲ್ಲೆಯ ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ ತಾಲ್ಲೂಕುಗಳಲ್ಲಿಯೂ ಭೂಮಿ ಅಲುಗಾಡಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.