ADVERTISEMENT

ಗಡಿಕೇಶ್ವರದಲ್ಲಿ ಮತ್ತೆ ಲಘು ಭೂಕಂಪ, ಉರುಳಿಬಿದ್ದ ಪಾತ್ರೆಗಳು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 6:14 IST
Last Updated 9 ಅಕ್ಟೋಬರ್ 2021, 6:14 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಹಲಚೇರಾ ಹಾಗೂ ಗಡಿಕೇಶ್ವರ ಗ್ರಾಮದಲ್ಲಿ ಶನಿವಾರ ನಸುಕಿನ 5.40ರ ಸಮಯದಲ್ಲಿ ಎರಡು ಬಾರಿ ಲಘು ಭೂ ಕಂಪನ ಅನುಭವವಾಗಿದೆ.

ಭೂಮಿ ಅಲುಗಾಡಿದ್ದಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದವು. ಇದರಿಂದ ಎಚ್ಚರಗೊಂಡ ಜನ ಮನೆಯಿಂದ ಹೊರಬಂದರು.

ಶುಕ್ರವಾರ ಕೂಡ ಇಲ್ಲಿ ಎರಡು ಬಾರಿ ಲಘು ಭೂ ಕಂಪನವಾಗಿತ್ತು. 24 ಗಂಟೆಗಳಲ್ಲಿ ಭೂಮಿ ಮೂರು ಬಾರಿ ಕಂಪಿಸಿದಂತಾಗಿದೆ.

ADVERTISEMENT

ಕಳೆದ ಕೆಲ ವರ್ಷಗಳಿಂದ ಭೂಮಿಯಿಂದ ಕೇಳಿ ಬರುತ್ತಿರುವ ಭಾರಿ ಸ್ಫೋಟಕ ಸದ್ದು ಜನರಲ್ಲಿ ಆತಂಕ ಮೂಡಿಸಿದೆ.

ಶನಿವಾರ ಬೆಳಿಗ್ಗೆ 5.30ರಿಂದ 6 ಗಂಟೆ ಒಳಗೆ ಮೂರು ಸಾರಿ ಭಾರಿ ಶಬ್ದ ಕೇಳಿಸಿದೆ ಎಂದು ಗ್ರಾಮಸ್ಥರು ಅನುಭವ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.