ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯ ದ್ವಾರದಿಂದ ಕಾರ್ಯಸೌಧಕ್ಕೆ ತೆರಳುವ ರಸ್ತೆಯಲ್ಲಿ ಸೋಮವಾರ ಸಂಜೆ ವಾಯುವಿಹಾರಕ್ಕೆ ತೆರಳುತ್ತಿದ್ದವರು, ಎದುರಿಗೆ ಕಾಣಿಸಿಕೊಂಡ ಬೃಹತ್ ಗಾತ್ರದ ಉಡವನ್ನು ಕಂಡು ಮೊಸಳೆ ಮರಿ ಎಂದುಕೊಂಡು ಬೆಚ್ಚಿ ಬಿದ್ದಿದ್ದಾರೆ. ಕೆಲವರು ಉಡದ ಫೋಟೊ ಹಾಗೂ ವಿಡಿಯೊಗಳನ್ನು ಸೆರೆಹಿಡಿದ್ದಾರೆ.
ಇದರಿಂದ ಗಾಬರಿಯಾದ ಉಡ ಪಕ್ಕದಲ್ಲಿದ್ದ ಪೊದೆಗಳಲ್ಲಿ ಸೇರಿ ಹೋಗಿದೆ.
ಕೆಲ ಹೊತ್ತು ರಸ್ತೆಯಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದವರು, ವಾಯು ವಿಹಾರ ನಡೆಸುತ್ತಿದ್ದವರು ಕೆಲ ಕಾಲ ಆತಂಕ್ಕೊಳಗಾದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ವಲಯ ಅರಣ್ಯಾಧಿಕಾರಿ ಜಗನ್ನಾಥ ಕೋರಳ್ಳಿ, ‘ಚಿತ್ರ ನೋಡಿದ ಬಳಿಕ ಇದು ಮೊಸಳೆಯಲ್ಲ, ಉಡ ಎಂಬುದು ಗೊತ್ತಾಯಿತು. ಮೊಸಳೆಗೆ ಇಷ್ಟು ದೊಡ್ಡ ಬಾಲವಿರುವುದಿಲ್ಲ. ಉಡದ ಬೆನ್ನು ಸಪಾಟಾಗಿದ್ದರೆ ಮೊಸಳೆಯ ಬೆನ್ನು ಮುಳ್ಳು ಮುಳ್ಳಾಗಿರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.