ADVERTISEMENT

ಸಹಕಾರಿ ಬ್ಯಾಂಕ್ ಖಾತೆಗಳ ಮೇಲೂ ನಿಗಾ ಇಡಿ: ಫೌಜಿಯಾ ತರನ್ನುಮ್

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 4:44 IST
Last Updated 2 ಏಪ್ರಿಲ್ 2024, 4:44 IST
ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿದರು. ಎಂಸಿಸಿ ನೋಡಲ್‌ ಅಧಿಕಾರಿ ಭಂವರ್‌ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಪಾಲ್ಗೊಂಡಿದ್ದರು

ಕಲಬುರಗಿ: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕ್ ಮೂಲಕ ನಡೆಯುವ ಆರ್ಥಿಕ ವಹಿವಾಟುಗಳ ಮೇಲೆಯೂ ನಿಗಾ ಇಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚಿಸಿದರು.

ಸೋಮವಾರ ತಮ್ಮ‌ ಕಚೇರಿಯಲ್ಲಿ ಸಹಕಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ‘ಯಾವುದೇ ಸಂಶಯಾಸ್ಪದ ವಹಿವಾಟು ಕಂಡುಬಂದಲ್ಲಿ ಕೂಡಲೆ ಗಮನಕ್ಕೆ ತರಬೇಕು’ ಎಂದರು.

₹50 ಸಾವಿರ ಮೇಲ್ಪಟ್ಟು ಒಂದೇ ಖಾತೆಯಿಂದ ಹಲವರ ಖಾತೆಗೆಳಿಗೆ ಆರ್.ಟಿ.ಜಿ.ಸ್ ಮೂಲಕ ಹಣ ವರ್ಗಾವಣೆ, ₹1 ಲಕ್ಷ ಮೇಲ್ಪಟ್ಟ ಹಣ ಜಮೆ ಹಾಗೂ ರಾಜಕೀಯ ಪಕ್ಷಗಳ ಖಾತೆಯ ಪ್ರತಿ ವಿತ್‌ಡ್ರಾ ಹಾಗೂ ಡಿಪಾಸಿಟ್‌ ಮಾಹಿತಿ ನೀಡಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

ಸಭೆಯಲ್ಲಿ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿ ಭಂವರ್ ಸಿಂಗ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.