ADVERTISEMENT

ರೈತರ ₹ 13,500 ಕೋಟಿ ಸಾಲ ಮನ್ನಾ ಜಮಾ: ಮೌದ್ಗಿಲ್‌

ಸರ್ವೆ ಹಾಗೂ ಭೂದಾಖಲೆಗಳ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್‌

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 11:20 IST
Last Updated 19 ಅಕ್ಟೋಬರ್ 2019, 11:20 IST
ಮನೀಷ್ ಮೌದ್ಗೀಲ್
ಮನೀಷ್ ಮೌದ್ಗೀಲ್   

ಕಲಬುರ್ಗಿ:ಶೇ 90ರಷ್ಟು ರೈತರ ಬೆಳೆ ಸಾಲ ಮನ್ನಾ ಆಯಾ ಬ್ಯಾಂಕ್‍ಗಳಿಗೆ ಸಂದಾಯ ಮಾಡಲಾಗಿದ್ದು, ಬಹಳವೆಂದರೆ ಶೇ. 10 ಪ್ರತಿಶತ ರೈತರು ಮಾತ್ರ ಉಳಿದಿದ್ದಾರೆಂದು ಸಾಲಮನ್ನಾ ಯೋಜನೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಸರ್ವೆ ಹಾಗೂ ಭೂದಾಖಲೆಗಳ ಇಲಾಖೆ ಆಯುಕ್ತ ಮನೀಷ್ ಮೌದ್ಗಿಲ್‌ ತಿಳಿಸಿದರು.

ನಗರದಲ್ಲಿ ಶುಕ್ರವಾರ ಇಲಾಖೆಯ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ 13.50 ಲಕ್ಷ ರೈತರ ಅಂದಾಜು ₹ 13,500 ಕೋಟಿ ರೈತರ ಸಾಲ ಮನ್ನಾ ಆಗಿದೆಯಲ್ಲದೇ ಸಂಬಂಧಿಸಿದ ಬ್ಯಾಂಕ್‍ಗಳಲ್ಲಿ ಜಮಾ ಮಾಡಲಾಗಿದೆ. ಈಗೇನಿದ್ದರೂ 1.50 ಲಕ್ಷ ಮಾತ್ರ ರೈತರು ಉಳಿದಿದ್ದಾರೆ. ಇವರ ಸಾವಿರ ಕೋಟಿ ಸಾಲ ಮನ್ನಾ ಹಣ ಇಲಾಖೆ ಬಳಿಯೇ ಇದೆ. ಉಳಿದ ರೈತರು ಆಧಾರ ಕಾರ್ಡ್, ರೇಷನ್ ಕಾರ್ಡ್, ಪಹಣಿ ಪತ್ರ ನೀಡಿದರೆ ಸಾಕು. ತಕ್ಷಣ ಹಣ ಸಂದಾಯ ಮಾಡಲಾಗುತ್ತದೆ’ ಎಂದು ವಿವರಿಸಿದರು.

ವಾಣಿಜ್ಯ ಬ್ಯಾಂಕ್‍ಗಳಲ್ಲಿ 22.50 ಲಕ್ಷ ರೈತರ ಸಾಲ ಮನ್ನಾ ಕುರಿತು ಅಂದಾಜಿಸಲಾಗಿತ್ತು. ಆದರೆ ವಾಣಿಜ್ಯ ಬ್ಯಾಂಕ್‍ಗಳಲ್ಲಿ 7 ಲಕ್ಷ ರೈತರೇ ಸಹಕಾರಿ ಸಂಘಗಳಲ್ಲಿ ಸಾಲ ಪಡೆದಿದ್ದರಿಂದ ಜತೆಗೆ ಟ್ರ್ಯಾಕ್ಟರ್ ಸೇರಿದಂತೆ ಇತರೆ ಸಾಲ ಪಡೆದಿದ್ದರಿಂದ ರೈತರ ಸಂಖ್ಯೆ ಕಡಿಮೆಯಾಗಿ 16.30 ಲಕ್ಷ ರೈತರು ಫಲಾನುಭವಿಗಳಾದರು. ರಾಷ್ಟೀಕೃತ ಬ್ಯಾಂಕ್‍ಗಳಲ್ಲಿ 22 ಲಕ್ಷ ರೈತರ 36 ಸಾವಿರ ಕೋಟಿ ರೂಪಾಯಿ ಹಾಗೂ 17 ಲಕ್ಷ ರೈತರ 10 ಸಾವಿರ ಕೋಟಿ ರೂಪಾಯಿ ಸಹಕಾರಿ ಸಂಘಗಳಲ್ಲಿ ಸಾಲವಿದೆ. ಇದನ್ನೆಲ್ಲ ಸೇರಿ 46 ಸಾವಿರ ಕೋಟಿ ರೂಪಾಯಿ ಎಂಬುದಾಗಿ ಅಂದಾಜಿಸಲಾಗಿತ್ತು. ಎಲ್ಲವೂ ಪರಿಶೀಲಿಸಿದಾಗ ಅಂತಿಮವಾಗಿ ₹ 15 ಸಾವಿರ ಕೋಟಿ ಆಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.