ADVERTISEMENT

ಕಲಬುರ್ಗಿ: ನಳಿನಿತಾಯಿ ಅಪ್ಪ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 3:54 IST
Last Updated 18 ಏಪ್ರಿಲ್ 2021, 3:54 IST
ನಳಿನಿತಾಯಿ ಅಪ್ಪ
ನಳಿನಿತಾಯಿ ಅಪ್ಪ   

ಕಲಬುರ್ಗಿ: ಇಲ್ಲಿನ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ ನಳಿನಿತಾಯಿ ಬಸವರಾಜಪ್ಪ ಅಪ್ಪ (79) ಅವರು ಶನಿವಾರ
ನಸುಕಿನಲ್ಲೊ ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ನಳಿನಿತಾಯಿ ಅವರು ಸಂಸ್ಥಾನದ ಬಸವರಾಜಪ್ಪ ಅಪ್ಪ ಅವರ ಪತ್ನಿ. ಅವರಿಗೆ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಗೌರವ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಸೇರಿದಂತೆ ಇಬ್ಬರು ಪುತ್ರರು ಮತ್ತು ಐವರು ಪುತ್ರಿಯರು ಇದ್ದಾರೆ.

ಪತಿಯ ಜತೆಗೂಡಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು. ಗೋದುತಾಯಿ ನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನ ಬಳಿಕ ಶರಣಬಸವೇಶ್ವರರ ತೋಟದಲ್ಲಿ (ಅಪ್ಪನವರ ತೋಟದಲ್ಲಿ) ಲಿಂಗಾಯತ ವಿಧಿ ವಿಧಾನಗಳಂತೆ ಅಂತ್ಯಕ್ರಿಯೆ ನಡೆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.