ADVERTISEMENT

ಹರ್ ಘರ್ ತಿರಂಗ ಅಭಿಯಾನ: ಸರ್ಕಾರಿ ನೌಕರರ ಸಂಘದಿಂದ‌ 600 ರಾಷ್ಟ್ರಧ್ವಜ ವಿತರಣೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:31 IST
Last Updated 12 ಆಗಸ್ಟ್ 2022, 5:31 IST
ಸರ್ಕಾರಿ ನೌಕರರ ಸಂಘದಿಂದ ನೀಡಲಾದ ತ್ರಿವರ್ಣ ಧ್ವಜಗಳನ್ನು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಹಾಗೂ ಸಿಬ್ಬಂದಿ ಪ್ರದರ್ಶಿಸಿದರು
ಸರ್ಕಾರಿ ನೌಕರರ ಸಂಘದಿಂದ ನೀಡಲಾದ ತ್ರಿವರ್ಣ ಧ್ವಜಗಳನ್ನು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಹಾಗೂ ಸಿಬ್ಬಂದಿ ಪ್ರದರ್ಶಿಸಿದರು   

ಕಲಬುರಗಿ: ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಗುರುವಾರ ನಗರದ ವಿವಿಧ‌ ಸರ್ಕಾರಿ ಕಚೇರಿಗಳಿಗೆ ತೆರಳಿ 600 ರಾಷ್ಟ್ರಧ್ವಜಗಳನ್ನು ನೌಕರರಿಗೆ ವಿತರಿಸಿತು.

ರಾಜು ಲೇಂಗಟಿ ನೇತೃತ್ವದ ಪದಾಧಿಕಾರಿಗಳ ತಂಡ ‌ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಡಿ.ಸಿ. ಯಶವಂತ‌ ವಿ. ಗುರುಕರ್ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ‌, ಸಮಕ್ಷಮ ಸಿಬ್ಬಂದಿಗೆ ರಾಷ್ಟ್ರಧ್ವಜ ವಿತರಿಸಿದರು.

ಸರ್ಕಾರಿ ಐ.ಟಿ.ಐ ಸಂಸ್ಥೆ, ವಾಣಿಜ್ಯ ತೆರಿಗೆಗಳ ಇಲಾಖೆ, ಹೆಚ್ಚುವರಿ ಶಿಕ್ಷಣ ಆಯುಕ್ತರ ಕಚೇರಿ, ನೀರಾವರಿ ಇಲಾಖೆ, ಡಿಎಚ್‌ಒ ಕಚೇರಿ, ಜಿಲ್ಲಾ ಆಸ್ಪತ್ರೆಗೆ ತೆರಳಿ‌ದ ತಂಡ ನೌಕರರಿಗೆ ಧ್ವಜ ವಿತರಿಸಿದಲ್ಲದೆ ಆ 13ರಿಂದ 15ರವರೆಗೆ ಪ್ರತಿ ಮನೆ, ಮನೆಯಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವಂತೆ ಮನವಿ ಮಾಡಲಾಯಿತು.

ADVERTISEMENT

ನೌಕರರ ಸಂಘದ ಪದಾಧಿಕಾರಿಗಳಾದ ಅಬ್ದುಲ್ ಅಜೀಮ್, ಬಾಬು ಮೌರ್ಯ, ಚಂದ್ರಕಾಂತ ಏರಿ, ಸಿದ್ದಲಿಂಗಯ್ಯ ಮಠಪತಿ, ಸತೀಶ ಸಜ್ಜನ, ಹಣಮಂತರಾಯ ಗೊಳಸಾರ, ನಿಜಲಿಂಗಪ್ಪ‌ ಕೊರಳ್ಳಿ, ಉಮಾದೇವಿ ಜಿತೇಂದ್ರ, ರವಿ ಮಿರಸ್ಕರ್, ಮಲ್ಲಿನಾಥ ಮಂಗಲಗಿ, ಗುರುಲಿಂಗಪ್ಪ ಪಾಟೀಲ, ರಾಜಕುಮಾರ ಸಾಲಿಮಠ, ಸುಭಾಷ್ ಫುಲಾರಿ, ಅಶೋಕ ಶಾಬಾದಿ, ಸಂಗಮನಾಥ ಮೋದಿ, ಜಮೀಲ್, ರಿಯಾಜ್ ಸುಳ್ಳದ, ಸತೀಶ, ಹಣಮಂತ ಮರಡಿ, ಭಾನುಕುಮಾರ ಕಿರಣ‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.