ADVERTISEMENT

₹ 4.22 ಲಕ್ಷ ಖೋಟಾ ನೋಟು ವಶ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 15:31 IST
Last Updated 17 ಜನವರಿ 2021, 15:31 IST
ಸೇಡಂ ಪಟ್ಟಣದಲ್ಲಿ ಭಾನುವಾರ ಖೋಟಾ ನೋಟು ಸಾಗಣೆ ಮಾಡುತ್ತಿದ್ದ ಅಲ್ಲಾವುದ್ದಿನ್ ಎಂಬ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ
ಸೇಡಂ ಪಟ್ಟಣದಲ್ಲಿ ಭಾನುವಾರ ಖೋಟಾ ನೋಟು ಸಾಗಣೆ ಮಾಡುತ್ತಿದ್ದ ಅಲ್ಲಾವುದ್ದಿನ್ ಎಂಬ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ   

ಸೇಡಂ (ಕಲಬುರ್ಗಿ ಜಿಲ್ಲೆ): ಪಟ್ಟಣದ ಚಿಂಚೋಳಿ ರಸ್ತೆಯಲ್ಲಿ ಶನಿವಾರ ಖೋಟಾ ನೋಟು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ಆರೋಪಿಯಿಂದ ₹ 4.22 ಲಕ್ಷದಷ್ಟು ಖೋಟಾ ನೋಡಿಗಳನ್ನು ವಶಕ್ಕೆ ಪ‍ಡೆದಿದ್ದಾರೆ.

ಪಟ್ಟಣದ ಆಶ್ರಯ ಕಾಲೊನಿ ನಿವಾಸಿ ಅಲ್ಲಾವುದ್ದಿನ್ ಬಂಧಿತ ಆರೋಪಿ. ಖೋಟಾ ನೋಟುಗಳನ್ನು ಬ್ಯಾಗಿನಲ್ಲಿಟ್ಟುಕೊಂಡು ಚಿಂಚೋಳಿ ಕಡೆ ಸಾಗಿಸಲು ಯತ್ನಿಸುತ್ತಿದ್ದ. ಇದರ ಖಚಿತ ಮಾಹಿತಿ ತಿಳಿದ ಕಲಬುರ್ಗಿ ಡಿಸಿಬಿಐ ಪಿಎಸ್‌ಐ ಪರಶುರಾಮ್ ಅವರ ತಂಡ ದಾಳಿ ನಡೆಸಿ ಬಂಧಿಸಿತು. ₹ 500, ₹ 200 ಹಾಗೂ ₹ 100 ಮುಖಬೆಲೆಯ ನಕಲಿ ನೋಟುಗಳು, ಬೈಕ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಪತ್ತೆ ಮಾಡಲು ಆರೋಪಿಯ ಮೊಬೈಲ್ ಸಂಪರ್ಕ ಜಾಲಾಡಿ, ಸಂಗಡಿಗರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದೇ ಆರೋಪಿ ಕೆಲ ವರ್ಷಗಳ ಹಿಂದೆ ಕೂಡ ಖೋಡಾ ನೋಟು ಸಾಗಣೆ ಪ್ರಕರಣದಲ್ಲಿಯೇ ಬಂಧಿತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸೇಡಂ ಪಿಎಸ್‌ಐ ನಾನಾಗಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.