ADVERTISEMENT

ಆನ್‌ಲೈನ್‌ನಲ್ಲಿ ಭಾಗವತ ಉಪನ್ಯಾಸ

ಅಧಿಕ ಮಾಸದ ಪ್ರಯುಕ್ತ ಕಲಬುರ್ಗಿಗೆ ಬಂದ ವಿದ್ಯಾತ್ಮ ತೀರ್ಥ ಶ್ರೀಪಾದಂಗಳವರು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:43 IST
Last Updated 25 ಸೆಪ್ಟೆಂಬರ್ 2020, 1:43 IST
ಕಲಬುರ್ಗಿಯ ಕೃಷ್ಣ ಮಂದಿರದಲ್ಲಿ ಬುಧವಾರ ಪ್ರಯಾಗ ಮಠದ ಹಿರಿಯರಾದ ವಿದ್ಯಾತ್ಮ ತೀರ್ಥ ಶ್ರೀಪಾದಂಗಳವರು ಅಧಿಕ ಮಾಸದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು
ಕಲಬುರ್ಗಿಯ ಕೃಷ್ಣ ಮಂದಿರದಲ್ಲಿ ಬುಧವಾರ ಪ್ರಯಾಗ ಮಠದ ಹಿರಿಯರಾದ ವಿದ್ಯಾತ್ಮ ತೀರ್ಥ ಶ್ರೀಪಾದಂಗಳವರು ಅಧಿಕ ಮಾಸದ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದರು   

ಕಲಬುರ್ಗಿ: ಇಲ್ಲಿನ ಕೃಷ್ಣ ಮಂದಿರ ವತಿಯಿಂದ ಅಧಿಕ ಮಾಸದ ಪ್ರಯುಕ್ತ ಪಾಢ್ಯದ ದಿನದಿಂದ ಒಂದು ತಿಂಗಳ ಕಾಲ (ಸೆ. 18ರಿಂದ ಅ. 16ರವರೆಗೆ) ಪ್ರತಿನಿತ್ಯ ಭಾಗವತ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಯಾಗ ಮಠದ ಹಿರಿಯರಾದ ವಿದ್ಯಾತ್ಮ ತೀರ್ಥ ಶ್ರೀಪಾದಂಗಳವರು ಪ್ರತಿ ದಿನ ಸಂಜೆ 6ರಿಂದ 7ರವರಿಗೆ ಈ ಉಪನ್ಯಾಸ ನೀಡುತ್ತಿದ್ದಾರೆ. ಇದರ ನೇರ ಪ್ರಸಾರವನ್ನು ಆನ್‌ಲೈನ್‌ ಮೂಲಕ ಕೂಡ ಬಿತ್ತರಿಸಲಾಗುತ್ತಿದ್ದು, ‘ಕೃಷ್ಣಮಂದಿರ ಕಲಬುರಗಿ’ (KRISHNA MANDIR KALABURGI) ಫೇಸ್‌ಬುಕ್‌ ಮೂಲಕ ವೀಕ್ಷಣೆ ಮಾಡಬಹುದು.

92 ವರ್ಷ ವಯಸ್ಸಿನ ವಿದ್ಯಾತ್ಮತೀರ್ಥರು ಅಧಿಕ ಮಾಸದ ಕಾರಣಕ್ಕಾಗಿಯೇ ಕಲಬುರ್ಗಿಗೆ ಬಂದು ಇಲ್ಲಿನ ವಿದ್ಯಾನಗರ ಕಾಲೊನಿಯಲ್ಲಿರುವ ಜಯತೀರ್ಥ ವಿದ್ಯಾರ್ಥಿನಿಯಲದಲ್ಲಿ ತಂಗಿದ್ದಾರೆ. ಪ್ರತಿ ದಿನ ಬೆಳಿಗ್ಗೆ ಅವರು ಕೃಷ್ಣ ಮಂದಿರದಲ್ಲಿ ಪೂಜೆ ಸಲ್ಲಿಸುತ್ತಾರೆ. ನಂತರ ಭಕ್ತಾದಿಗಳಿಗೆ ದರ್ಶನ ನೀಡಲಿದ್ದು, ಪಾದಪೂಜೆಗೂ ಅವಕಾಶ ನೀಡಲಾಗಿದೆ.

ADVERTISEMENT

ನಿತ್ಯ ಪೂಜಾದಿ ಕಾರ್ಯಗಳು ಸಂಪನ್ನವಾದ ನಂತರದ ಸಂಜೆ 5ರಿಂದ 6ರವರೆಗೆ ಮಹಿಳಾ ಮಂಡಳಗಳಿಂದ 33 ಹಾಡುಗಳ ವಿಶೇಷ ಭಜನೆ ಕೂಡ ನಡೆಯಲಿದೆ. ನಂತರ 6ರಿಂದ 7ರವರೆಗೆ ಶ್ರೀಪಾದಂಗಳವರು ಭಾಗವತ ಉಪನ್ಯಾಸ ನೀಡುತ್ತಾರೆ.

ಆನ್‌ಲೈನ್‌ ಮಾತ್ರವಲ್ಲದೇ, ಖುದ್ದಾಗಿ ಕೂಡ ಕೃಷ್ಣ ಮಂದಿರಕ್ಕೆ ಬಂದು ಈ ಉಪನ್ಯಾಸ ಆಲಿಸಬಹುದು. ಕೊರೊನಾ ವೈರಾಣುವಿನಿಂದ ರಕ್ಷಣೆ ಪಡೆಯಲು ನಿರ್ದಿಷ್ಟ ಅಂತರ, ಸ್ಯಾನಿಟೈಸ್‌, ಮಾಸ್ಕ್‌, ಥರ್ಮಲ್‌ ಸ್ಕ್ರೀನಿಂಗ್‌ ಮುಂತಾದ ವ್ಯವಸ್ಥೆ ಕೂಡ ಮಾಡಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ನವಲಿ ಕೃಷ್ಣಾಚಾರ್ಯ 9448652620, ವಿದ್ಯಾಸಾಗರ್ ರೇವೂರ್ 6360084875 ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.