ADVERTISEMENT

ಅಫಜಲಪುರದಲ್ಲಿ ತಿರಂಗಾ ಯಾತ್ರೆ: ‘ದೇಶ ರಕ್ಷಣೆಗೆ ನಾವೆಲ್ಲರೂ ಕೈಜೋಡಿಸಬೇಕು’

​ಪ್ರಜಾವಾಣಿ ವಾರ್ತೆ
Published 25 ಮೇ 2025, 15:13 IST
Last Updated 25 ಮೇ 2025, 15:13 IST
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಅಫಜಲಪುರದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು 
ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ಸಿನ ಹಿನ್ನೆಲೆಯಲ್ಲಿ ಅಫಜಲಪುರದಲ್ಲಿ ತಿರಂಗಾ ಯಾತ್ರೆ ನಡೆಸಲಾಯಿತು    

ಅಫಜಲಪುರ: ‘ಯಾವುದೇ ದೇಶ ಭಾರತದ ತಂಟೆಗೆ ಬಂದರೆ ನಮ್ಮ ಸೈನಿಕರ ಶಕ್ತಿ ಏನು ಎಂಬುದನ್ನು ಜಗತ್ತಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದಾರೆ. ದೇಶದ ರಕ್ಷಣೆ ವಿಷಯ ಬಂದಾಗ ನಾವೆಲ್ಲರೂ ಒಗ್ಗಟಿನಿಂದ ನಮ್ಮ ಸೈನಿಕರ ಹಾಗೂ ಪ್ರಧಾನಿ ಮೋದಿಯವರ ಜೊತೆಗೆ ನಿಲ್ಲಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಪರೇಷನ್ ಸಿಂಧೂರ ಯಶಸ್ವಿಯಾದ ಅಂಗವಾಗಿ ಭಾನುವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ತಿರಂಗಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಈ ಯಾತ್ರೆಯಲ್ಲಿ ಅನೇಕರು ಪಾಲ್ಗೊಂಡು ಯಶಸ್ಸು ತಂದಿದ್ದು ಸಂತಸ ತಂದಿದೆ’ ಎಂದು ಅವರು ತಿಳಿಸಿದರು. ಪಟ್ಟಣದ ಮಳೇಂದ್ರ ಸಂಸ್ಥಾನ ಮಠದ ಅವರಣದಿಂದ ತಿರಂಗಾ ಯಾತ್ರೆಗೆ ವಿಶ್ವರಾಧ್ಯ ಮಳೇಂದ್ರ ಶ್ರೀಗಳು ಚಾಲನೆ ನೀಡಿದರು. ತಾಲ್ಲೂಕಿನ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.

ಶ್ರೀಕಂಠ ಶಿವಾಚಾರ್ಯ ರೇವೂರ, ಪ್ರಣವ ನಿರಂಜನ ಮಹಾಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅವ್ವಣ್ಣ ಮ್ಯಾಕೇರಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ವಿದ್ಯಾಧರ ಮಂಗಳೂರು, ರಾಜು ಜಿಡ್ಡಗಿ, ರಮೇಶ ಬಾಕೆ, ಚನ್ನಮ್ಮ ಪಾಟೀಲ್, ದಾನು ಪಾತಾಟೆ, ಶರಣು ಪದಕಿ, ವಿಶ್ವನಾಥ ರೇವೂರ, ಶೈಲೇಶ್ ಗುಣಾರಿ, ಸುನಿಲ್ ಶೆಟ್ಟಿ, ಮಳೆಪ್ಪ ಡಾಂಗೆ, ಬಸವರಾಜ ಸಪ್ಪಣಗೋಳ, ಮಲ್ಲಿಕಾರ್ಜುನ ನಿಂಗದಳ್ಳಿ, ಮನ್ ಕಿ ಬಾತ್ ರಾಜ್ಯ ಸಂಚಾಲಕ ಪ್ರಸನ್ನ ನಾಯಕ, ಶಿವಪುತ್ರ ಕರೂರ, ಮಹದೇವ ಗುತ್ತೇದಾರ, ಶ್ರೀದೇವಿ ಗುಣಾರಿ, ಪ್ರಭಾವತಿ ಮೇತ್ರೆ, ಪ್ರತಿಭಾ ಮಹೇಂದ್ರಕರ, ಸಂಗಮೇಶ ಅಂಜುಟಗಿ, ಸಿದ್ದು ರಾಣಿ, ನೂರ ಅಹ್ಮದ್, ಗುರು ಸಾಲಿಮಠ, ಬೀರಣ್ಣ ಕಲ್ಲೂರ, ಶಿವು ರಾಂಪುರೆ, ಮಲ್ಲು ಜಯಗೊಂಡ, ಅಂಬರೀಷ ಹಿರೇಮಠ, ಮಹೇಶ್ ಶೆಟ್ಟಿ, ಸಂತೋಷ ಶೆಟ್ಟಿ, ಬಸವಣ್ಣಪ್ಪ ಅಂಕಲಗಿ, ಮಹಾಂತೇಶ ಬಳೂಂಡಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.