ADVERTISEMENT

‘ಅನುಭಾವದ ಅಭಿವ್ಯಕ್ತಿಯೇ ಲಲಿತಕಲೆ’: ಡಾ. ರೆಹಮಾನ್ ಪಟೇಲ್‌

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 2:47 IST
Last Updated 8 ಡಿಸೆಂಬರ್ 2021, 2:47 IST
ಕಲಬುರಗಿಯಲ್ಲಿ ವಿಜಯಕುಮಾರ್‌ ಎಸ್‌. ಅವರ ಚಿತ್ರಕಲಾ ಪ್ರದರ್ಶನವನ್ನು ಡಾ. ರೆಹಮಾನ್ ಪಟೇಲ್‌, ವಿಜಯಕುಮಾರ ತೇಗಲತಿಪ್ಪಿ, ಬಸವರಾಜ ಜಾನೆ ವೀಕ್ಷಿಸಿದರು
ಕಲಬುರಗಿಯಲ್ಲಿ ವಿಜಯಕುಮಾರ್‌ ಎಸ್‌. ಅವರ ಚಿತ್ರಕಲಾ ಪ್ರದರ್ಶನವನ್ನು ಡಾ. ರೆಹಮಾನ್ ಪಟೇಲ್‌, ವಿಜಯಕುಮಾರ ತೇಗಲತಿಪ್ಪಿ, ಬಸವರಾಜ ಜಾನೆ ವೀಕ್ಷಿಸಿದರು   

ಕಲಬುರಗಿ: ಚಿತ್ರಕಲಾ ಕಲಾವಿದ ವಿಜಯಕುಮಾರ್‌ ಅವರ ಕಲಾಕೃತಿಗಳು ಅದ್ಭುತವಾಗಿದ್ದು, ಜೀವನಾನುಭವದಿಂದ ಮೂಡಿದ ರೇಖಾ ಚಿತ್ರಗಳು ಅತ್ಯುತ್ತಮವಾಗಿವೆ ಎಂದು ಡಾ. ರೆಹಮಾನ್ ಪಟೇಲ್‌ ಅಭಿ‍ಪ್ರಾಯಪಟ್ಟರು.

ನಗರದ ಬಿದ್ದಾಪುರ ಬಡಾವಣೆಯ ಕೃತ್ತಿಕ ಸಾಂಸ್ಕೃತಿಕ ಸಂಸ್ಥೆಯ ಜಾನೆ ಕಲಾ ಗ್ಯಾಲರಿಯಲ್ಲಿ ಆಯೋಜಿಸಿದ್ದ ಚಿತ್ರಕಲಾವಿದ ವಿಜಯಕುಮಾರ್‌ ಎಸ್‌. ಅವರ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

‘ಅನುಭಾವದ ಅಭಿವ್ಯಕ್ತಿಯೇ ಲಲಿತ ಕಲೆ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಸಾಹಿತ್ಯ ಮತ್ತು ಚಿತ್ರಕಲೆ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಸಾಹಿತ್ಯ ಪರಿಷತ್ ವತಿಯಿಂದ ಚಿತ್ರ ಕಲಾವಿದರಿಗೆ ಪೂರಕವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಉದ್ಯಮಿ ವೆಂಕಟೇಶ ಅಮ್ಮಣ ಇದ್ದರು. ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿತ್ರಕಲಾವಿದ ಬಸವರಾಜ ಎಲ್. ಜಾನೆ ಕಲಾವಿದರಿಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಚ್ಚಿನ ಕಾರ್ಯಕ್ರಮಗಳನ್ನು ತಮ್ಮ ಗ್ಯಾಲರಿಯ ವತಿಯಿಂದ ನೆರವೇರಿಸುವ ಹಂಬಲವನ್ನು ವ್ಯಕ್ತಪಡಿಸಿದರು.

ಸಂಸ್ಥೆಯ ಕಾರ್ಯದರ್ಶಿ ಮಂಜುಳಾ ಜಾನೆ ಸ್ವಾಗತಿಸಿದರು. ಸೂರ್ಯಕಾಂತ ನಂದೂರ ವಂದಿಸಿದರು. ಶಿಲ್ಪಾ ಹೆಬ್ಬಾಳ ನಿರೂಪಿಸಿದರು. ಹಿರಿಯ ಚಿತ್ರ ಕಲಾವಿದರಾದ ವಿ.ಬಿ. ಬಿರಾದಾರ, ಛಾಯಾ ಚಿತ್ರಕಾರ ನಾರಾಯಣ ಜೋಶಿ, ಮಹ್ಮದ್ ಅಯಾಜುದ್ದೀನ್ ಪಟೇಲ್, ಡಾ ಪರಶುರಾಮ, ಸುರೇಶ ಬಡಿಗೇರ, ಡಾ ಶಾಹೀದ್ ಪಾಶಾ, ಕಲ್ಯಾಣಪ್ಪ ಹಂಗರಕಿ, ಸಂಗಮೇಶ, ರೇವಣಸಿದ್ಧಪ್ಪ ಹೊಟ್ಟಿ, ಅಭಿಜಿತ್, ಜಲಜಾಕ್ಷಿ, ಕವಿತಾ, ನೀಲಾಂಬಿಕಾ ಇದ್ದರು.

ಡಿಸೆಂಬರ್ 10ರವರೆಗೆ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮುಂಜಾನೆ 11ರಿಂದ ಸಂಜೆ 6ರವರೆಗೆ ಸಾರ್ವಜನಿಕರು, ಚಿತ್ರಕಲಾವಿದರು, ಕಲಾಆಸಕ್ತರು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.