ADVERTISEMENT

ಗಾಣಗಾಪುರ: ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:03 IST
Last Updated 1 ಡಿಸೆಂಬರ್ 2020, 3:03 IST
ಅಫಜಲಪುರ ತಾಲ್ಲೂಕಿನ ತಾಲ್ಲೂಕಿನ ದೇವಲ ಗಣಗಾಪುರದ ದತ್ತ ದೇವಸ್ಥಾನದಲ್ಲಿ ಸೋಮವಾರ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು
ಅಫಜಲಪುರ ತಾಲ್ಲೂಕಿನ ತಾಲ್ಲೂಕಿನ ದೇವಲ ಗಣಗಾಪುರದ ದತ್ತ ದೇವಸ್ಥಾನದಲ್ಲಿ ಸೋಮವಾರ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು   

ಅಫಜಲಪುರ: ತಾಲ್ಲೂಕಿನ ದೇವಲ ಗಣಗಾಪುರದ ದತ್ತ ದೇವಸ್ಥಾನದಲ್ಲಿ ಸೋಮವಾರ ಗೌರಿ ಹುಣ್ಣಿಮೆ ಪ್ರಯುಕ್ತ ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ಜರುಗಿತು.

ದತ್ತ ಮಹಾರಾಜರ ಪಲ್ಲಕ್ಕಿ ಉತ್ಸವ ದೇವಸ್ಥಾನದಿಂದ ಸಂಗಮ ಕ್ಷೇತ್ರದವರೆಗೂ ಸಾಗಿಬಂತು. ನಂತರ ಪಲ್ಲಕ್ಕಿ ದತ್ತ ದೇವಸ್ಥಾನ ಬಂದು ತಲುಪಿತು. ಯಾತ್ರಿಕರು ಹೂವು, ಹಣ್ಣು ಎಸೆದು ಜೈ ಘೋಷ ಹಾಕಿ ದರ್ಶನ ಪಡೆದರು. ವಿವಿಧ ಭಾಗಗಳಿಂದ ಯಾತ್ರಿಕರು ಆಗಮಿಸಿದ್ದರು. ಹೆಚ್ಚಿನ ಯಾತ್ರಿಕರು ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿದ್ದರು. ಯಾತ್ರಿಕರು ಭಾನುವಾರದಿಂದಲೇ ಆಗಮಿಸತೊಡಗಿದ್ದರು.

ಭೀಮಾ– ಅಮರ್ಜಾ ಸಂಗಮದಲ್ಲಿ ಯಾತ್ರಿಕರು ಪುಣ್ಯಸ್ನಾನ ಮಾಡಿದರು. ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ದೇವಸ್ಥಾನದ ಕಾರ್ಯದರ್ಶಿಯಾದ ಧನಂಜಯ ಪೂಜಾರಿ ಹಾಗೂ ಅರ್ಚಕರಾದ ಸದಾಶಿವ ಪೂಜಾರಿ, ಪ್ರತೀಕ ಪೂಜಾರಿ, ರತ್ನಾಕರ ಪೂಜಾರಿ, ಕಲ್ಲಂ ಭಟ್ ಪೂಜಾರಿ, ಬಾಲಕೃಷ್ಣ ಭಟ್, ಋಷಿಕೇಶ ಭಟ್, ನಂದಕುಮಾರ ಭಟ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.