ADVERTISEMENT

ಪರಿಷತ್‌ ಚುನಾವಣೆ: ಕಾಂಗ್ರೆಸ್‌ನಿಂದ ಪ್ರಚಾರ 27ರಂದು

​ಪ್ರಜಾವಾಣಿ ವಾರ್ತೆ
Published 25 ಮೇ 2024, 16:07 IST
Last Updated 25 ಮೇ 2024, 16:07 IST
ರಮೇಶ್ ಪೂಜಾರಿ
ರಮೇಶ್ ಪೂಜಾರಿ   

ಅಫಜಲಪುರ: ‘ಈಶಾನ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಚಂದ್ರಶೇಖರ ಬಿ. ಪಾಟೀಲ ಪರ ಪ್ರಚಾರ ಕಾರ್ಯಕ್ರಮವನ್ನು ಮೇ 27ರಂದು ಪಟ್ಟಣದ ನ್ಯಾಷನಲ್ ಕಲ್ಯಾಣಮಂಟಪದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ’ ಎಂದು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ ಪೂಜಾರಿ ತಿಳಿಸಿದರು.

ಅಭ್ಯರ್ಥಿ ಚಂದ್ರಶೇಖರ ಬಿ. ಪಾಟೀಲ ಪರ ಅಲೆಯಿದೆ. ಹಿಂದೆ ಬಿಜೆಪಿ ಅಭ್ಯರ್ಥಿಯಾದವರು, ಅಭವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅದಕ್ಕಾಗಿ ಪದವೀಧರರು ಭ್ರಮನಿರಸರಾಗಿದ್ದಾರೆ. ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತವಾಗಿದೆ. ಪ್ರಚಾರ ಕಾರ್ಯಕ್ರಮಕ್ಕೆ ಈಶಾನ್ಯ ಪದವೀಧರ ವಿಧಾನ ಪರಿಷತ್ ಅಭ್ಯರ್ಥಿಯಾಗಿರುವ ಚಂದ್ರಶೇಖರ ಬಿ. ಪಾಟೀಲ ಭಾಗವಹಿಸುವರು. ಶಾಸಕ ಎಂ.ವೈ. ಪಾಟೀಲ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಜಿಲ್ಲೆಯ ಕಾಂಗ್ರೆಸ್ ಮುಖಂಡರು ಹಾಗೂ ಮತಕ್ಷೇತ್ರದ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯ ಪದವೀಧರ ಮತದಾರರು ಸಭೆಯಲ್ಲಿ ಭಾಗವಹಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT