ADVERTISEMENT

ಪಿಸ್ತೂಲ್‌, ಚಿನ್ನಾಭರಣ ವಶ: ಬಂಧನ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 3:03 IST
Last Updated 10 ಏಪ್ರಿಲ್ 2021, 3:03 IST
ಕಲಬುರ್ಗಿಯ ಚೌಕ್‌ ಠಾಣೆ ಪೊಲೀಸರು ಶುಕ್ರವಾರ ಕಳವು ಆರೋಪಿಯನ್ನು ಬಂಧಿಸಿ, ಚಿನ್ನಾಭರಣ ಹಾಗೂ ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ
ಕಲಬುರ್ಗಿಯ ಚೌಕ್‌ ಠಾಣೆ ಪೊಲೀಸರು ಶುಕ್ರವಾರ ಕಳವು ಆರೋಪಿಯನ್ನು ಬಂಧಿಸಿ, ಚಿನ್ನಾಭರಣ ಹಾಗೂ ಪಿಸ್ತೂಲ್‌ ವಶಪಡಿಸಿಕೊಂಡಿದ್ದಾರೆ   

ಕಲಬುರ್ಗಿ: ನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿರುವ ನಗರ ಪೊಲೀಸರು, ಶುಕ್ರವಾರ ಆರೋಪಿಯನ್ನು ಬಂಧಿಸಿ ಒಂದು ಪಿಸ್ತೂಲ್ ಹಾಗೂ ಕಳವು ಮಾಡಿದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ವಿವೇಕಾನಂದ ಅಲಿಯಾಸ್‌ ಉಮೇಶ ಮಲ್ಲೆ ಖಾನಾಪುರ (23) ಬಂಧಿತ ಯುವಕ. ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ನಿವಾಸಿ. ಆರೋಪಿಯಿಂದ ₹ 1.20 ಲಕ್ಷ ಮೌಲ್ಯದ ಪಿಸ್ತೂಲ್, ಎರಡು ಜೀವಂತ ಗುಂಡುಗಳು, ₹ 5.7 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.

ಇಲ್ಲಿನ ಶಹಾ ಬಜಾರ್‌ನಲ್ಲಿರುವ ಮಲ್ಲಿಕಾರ್ಜುನ ಖೇಮಜಿ ಎಂಬುವವರ ಮನೆಯಲ್ಲಿ ಈಚೆಗೆ ಕಳ್ಳತನ ಮಾಡಲಾಗಿತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದ ಪೊಲೀಸರು ಬೆಳಮಗಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ADVERTISEMENT

ನಗರ ಪೊಲೀಸ್‌ ಕಮಿಷನರ್ ಸತೀಶಕುಮಾರ, ಡಿಸಿಪಿಗಳಾದ ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ, ಎಸಿಪಿ ಗಿರೀಶ ಎಸ್.ಬಿ ಮಾರ್ಗದರ್ಶನಲ್ಲಿ ಚೌಕ್ ಠಾಣೆಯ ಇನ್‍ಸ್ಪೆಕ್ಟರ್
ಎಸ್.ಆರ್.ನಾಯಕ ಮತ್ತು ಸಿಬ್ಬಂದಿ ಕೇಶುರಾಯ, ಸಿದ್ರಾಮಯ್ಯ, ಅಶೋಕ, ಉಮೇಶ ಅವರು ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.