ADVERTISEMENT

ಕಲಬುರ್ಗಿ: ನಾಲ್ವರು ಕಳ್ಳರ ಬಂಧನ: 150 ಗ್ರಾಂ ಚಿನ್ನ ಜಪ್ತಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 13:02 IST
Last Updated 28 ಆಗಸ್ಟ್ 2020, 13:02 IST
ಕಳ್ಳರು ಜಪ್ತಿ ಮಾಡಿದ ಚಿನ್ನದ ಆಭರಣಗಳೊಂದಿಗೆ ಎಸಿಪಿ ಎಸ್‌.ಎಚ್‌. ಸುಬೇದಾರ್‌, ಪೊಲೀಸ್‌ ಇನ್‌ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ ಹಾಗೂ ಸಿಬ್ಬಂದಿ ಇದ್ದಾರೆ
ಕಳ್ಳರು ಜಪ್ತಿ ಮಾಡಿದ ಚಿನ್ನದ ಆಭರಣಗಳೊಂದಿಗೆ ಎಸಿಪಿ ಎಸ್‌.ಎಚ್‌. ಸುಬೇದಾರ್‌, ಪೊಲೀಸ್‌ ಇನ್‌ಸ್ಪೆಕ್ಟರ್ ಸೋಮಲಿಂಗ ಕಿರದಳ್ಳಿ ಹಾಗೂ ಸಿಬ್ಬಂದಿ ಇದ್ದಾರೆ   

ಕಲಬುರ್ಗಿ: ನಗರದ ಆರ್‌.ಎಸ್‌. ಕಾಲೊನಿಯ ಗುಂಡನಗೌಡ ಪಾಟೀಲ ಎಂಬುವವರ ಮನೆಯ ಅಲ್ಮೇರಾದಲ್ಲಿಟ್ಟಿದ್ದ 136 ಗ್ರಾಂ ಚಿನ್ನಾಭರಣ ಸೇರಿದಂತೆ 150 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ನಾಲ್ವರು ಕಳ್ಳರನ್ನು ಬಂಧಿಸಿರುವ ಗ್ರಾಮೀಣ ಠಾಣೆ ಪೊಲೀಸರು ಅವರಿಂದ ₹ 7.80 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್‌ 26ರಂದು ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಬಗ್ಗೆ ಗುಂಡನಗೌಡ ಅವರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಸೋಮಲಿಂಗ ಕಿರದಳ್ಳಿ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ನಡೆಸಿ ಮಾಲಗತ್ತಿ ಕ್ರಾಸ್‌ ಇತ್ತೇಹಾದ್‌ ಕಾಲೊನಿಯ ವಾಜಿದ್ ಜಿಲಾನಿ ಗಾಣಾವಾಲೆ (25), ಎಂಎಸ್‌ಕೆ ಮಿಲ್ ನಿವಾಸಿ ಸಮೀರ್‌ ಮುನಿರೊದ್ದೀನ್ (19), ಅಬೂಬಕರ್ ಕಾಲೊನಿಯ ಮೊಹಮ್ಮದ್ ಇದ್ರಿಸ್ ಮೊಹಮ್ಮದ್ ಬಿಲಾಲ್ (29), ಮೊಹಮ್ಮದ್‌ ಯೂನುಸ್ ಎಂಬುವವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಅಂಬಾಜಿ ಧನೆಕರ, ಮಲ್ಲಿಕಾರ್ಜುನ ಶಿವಶರಣಪ್ಪ ಮಂಗಲಗಿ, ಪ್ರಕಾಶ ಬಾಗೇವಾಡಿ, ನಾಗೇಂದ್ರ ಸಗರ, ಅನಿಲ್ ರಾಠೋಡ, ಬಂಡೆಪ್ಪ, ಶ್ರೀನಾಥ, ಶಿವಾನಂದ, ಚನ್ನಬಸಯ್ಯಾ ಮಠಪತಿ, ಶರಣು ನರೆಗಾ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.