ADVERTISEMENT

ಕಾಂಗ್ರೆಸ್‌ ಹಣ ಹಂಚಿಕೆ ಆರೋಪ: ಪೊಲೀಸ್​ ವಾಹನದ ಎದುರು ಉಮೇಶ್​ ಜಾಧವ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:56 IST
Last Updated 19 ಮೇ 2019, 10:56 IST
   

ಚಿಂಚೋಳಿ: ಚಿಂಚೋಳಿ ವಿಧಾನಸಭಾ ಕ್ಷೇತ್ರದ ಖಾನಾಪುರದಲ್ಲಿ ಮತದಾರರಿಗೆ ಕಾಂಗ್ರೆಸ್‌ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಉಮೇಶ್​ ಜಾಧವ್​ ಪೊಲೀಸ್​ ವಾಹನದ ಎದುರು ಕುಳಿತು ಪ್ರತಿಭಟನೆ ನಡೆಸಿದರು.

ಉನೇಶ್ ಜಾಧವ್ ತಾಲ್ಲೂಕು ಪಂಚಾಯ್ತಿ ಸದಸ್ಯರ ಮೇಲೆ ಆರೋಪ ಮಾಡಿದ್ದು, ಐದಾರು ವಾಹನಗಳಲ್ಲಿ ಆಯುಧಗಳೊಂದಿಗೆ ಹಣ ಹಂಚಿಕೆಮಾಡಿದ್ದಾರೆ.ಚಿತ್ತಾಪುರ ತಾಲ್ಲುಕು ಪಂಚಾಯ್ತಿ ಸದಸ್ಯ ನಾಮದೇವ್ ರಾಠೋಡ್ ಮೇಲೆ ಆರೋಪ ಹಣ ಹಂಚಿದ್ದಾರೆ ಎಂದು ದೂರಿದ್ದಾರೆ.

ಹಣ ಹಂಚುವ ಗಾಡಿಯ ಮೇಲೆ ಬಿಜೆಪಿಯವರಿಂದ ಕಲ್ಲು ತೂರಾಟ ನಡೆದಿದೆ. ಹಣ ಹಂಚಿಕೆಯಲ್ಲಿ ಪ್ರಿಯಾಂಕ್ ಖರ್ಗೆಯ ಕೈವಾಡವಿದೆ ಎಂದು ಆರೋಪಿಸಲಾಗಿದೆ.

ADVERTISEMENT

ಮಧು ಮಗನಿಂದ ಮತದಾನ
ಇಂದು ವಿವಾಹವಾದವೀರಭದ್ರಪ್ಪ ಮತ್ತು ಸ್ವಪ್ನಚಿಮ್ಮಾಇದಲಾಯಿಗ್ರಾಮದಲ್ಲಿ ‌ಮತ ದಾನ ಮಾಡಿದರು.

ಮದುವೆಯಾದ ಬಳಿಕ ನೇರ ಮತಗಟ್ಟೆಗೆ ‌ದಂಪತಿ ಬಂದರು. ವರಮಾತ್ರ ಮತದಾನ ಮಾಡಿದರು.ವಧು ಸ್ವಪ್ನ ಸೇಡಂ ತಾಲೂಕಿನ ಹೆಡಗಾ ಗ್ರಾಮದವರು.

ಚಿಮ್ಮಾಇದಲಾಯಿ ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.

ಕುಂದಗೋಳ:ಮಧ್ಯಾಹ್ನ3ರವರೆಗೆಶೇ 59.50ರಷ್ಟು ಮತದಾನ

ಕುಂದಗೋಳ ವಿಧಾನಸಭಾ ಉಪಚುನಾವಣೆಮಧ್ಯಾಹ್ನ 3ಗಂಟೆಯವರೆಗೆಶೇ 59.50ರಷ್ಟು ಮತದಾನವಾಗಿದೆ.

54944 ಪುರುಷರು ಮತ್ತು 57779 ಮಹಿಳೆಯರು ಸೇರಿ 1,12,724 ಒಟ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.