ADVERTISEMENT

ಬಲಿಗಾಗಿ ಕಾದಿರುವ ಗುಂಡಿಗಳು...

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:11 IST
Last Updated 30 ಜುಲೈ 2023, 15:11 IST
ಕಲಬುರಗಿಯ ಆದರ್ಶ ನಗರದ ರಸ್ತೆಯಲ್ಲಿ ಬಿದ್ದ ಗುಂಡಿಗಳು ದಾಟಲು ಪರದಾಡಿದ ವಾಹನ ಸವಾರ
ಕಲಬುರಗಿಯ ಆದರ್ಶ ನಗರದ ರಸ್ತೆಯಲ್ಲಿ ಬಿದ್ದ ಗುಂಡಿಗಳು ದಾಟಲು ಪರದಾಡಿದ ವಾಹನ ಸವಾರ   

ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿ ನಗರವು ಗುಂಡಿಗಳ ತಾಣವಾಗಿದೆ. ನಗರದ ರಸ್ತೆ ಮೇಲಿನ ಗುಂಡಿಗಳು ಮೃತ್ಯುಕೂಪಗಳಂತೆ ಬಾಯಿ ತೆರೆದಿವೆ.

ಸತತ ಮಳೆ, ಅಸಮರ್ಪಕ ಚರಂಡಿ, ಅವೈಜ್ಞಾನಿಕ ಕಾಮಗಾರಿ, ಪಾಲಿಕೆಯ ಅಧಿಕಾರಿಗಳ ವೈಫಲ್ಯದಿಂದಾಗಿ ಗುಂಡಿಗಳಿಗೆ ಪರಿಹಾರ ಸಿಗುತ್ತಿಲ್ಲ. ವಾರ್ಷಿಕ ಸುಮಾರು ₹ 50 ಲಕ್ಷ ಸುರಿದರೂ ಗುಂಡಿಗಳಿಗೆ ಮುಕ್ತಿ ಸಿಗುತ್ತಿಲ್ಲ. ‘ಮಳೆಗೆ ಕೆಸರುಗದ್ದೆಯಂತೆ ಬದಲಾದ ರಸ್ತೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು. ಸ್ವಲ್ಪವೇ ಮೈಮರೆತರು ಅಪಾಯಕ್ಕೆ ತಲೆ ಕೊಡಬೇಕಾಗುತ್ತದೆ’ ಎಂದು ವಾಹನ ಸವಾರರು ಅಲವತ್ತುಕೊಂಡರು.

ಮಳೆಯಿಂದ ಹದಗೆಟ್ಟು ಗುಂಡಿ ಬಿದ್ದ ರಸ್ತೆಗಳು ‘ಪ್ರಜಾವಾಣಿ’ಯ ಕ್ಯಾಮೆರಾ ಕಣ್ಣಿಗೆ ಕಂಡ ಬಗೆ

ADVERTISEMENT

ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್

ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣ ಸಮೀಪದ ರಸ್ತೆಯಲ್ಲಿನ ಗುಂಡಿಗಳು
ಕಲಬುರಗಿಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ರಸ್ತೆ ಗುಂಡಿಯಲ್ಲಿ ನಿಂತ ಮಳೆ ನೀರು
ಕಲಬುರಗಿಯ ಖೂಬಾ ಪ್ಲಾಟ್‌ ಬಳಿ ರಸ್ತೆಯ ಅವ್ಯವಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.