ADVERTISEMENT

‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:56 IST
Last Updated 27 ಅಕ್ಟೋಬರ್ 2021, 4:56 IST
‘ಪ್ರಜಾವಾಣಿ’ ಹೊರತಂದ 2021ನೇ ಸಾಲಿನ ‘ದೀಪಾವಳಿ ವಿಶೇಷಾಂಕ’ವನ್ನು ಕಲಬುರಗಿಯಲ್ಲಿ ಮಂಗಳವಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಹಾಗೂ ಕಾರ್ಯದರ್ಶಿ ಆರ್‌.ವೆಂಕಟೇಶ ಕುಮಾರ ಅವರು ಲೋಕಾರ್ಪಣೆ ಮಾಡಿದರು
‘ಪ್ರಜಾವಾಣಿ’ ಹೊರತಂದ 2021ನೇ ಸಾಲಿನ ‘ದೀಪಾವಳಿ ವಿಶೇಷಾಂಕ’ವನ್ನು ಕಲಬುರಗಿಯಲ್ಲಿ ಮಂಗಳವಾರ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ. ಪಾಟೀಲ ರೇವೂರ ಹಾಗೂ ಕಾರ್ಯದರ್ಶಿ ಆರ್‌.ವೆಂಕಟೇಶ ಕುಮಾರ ಅವರು ಲೋಕಾರ್ಪಣೆ ಮಾಡಿದರು   

ಕಲಬುರಗಿ: ‘ಪ್ರಜಾವಾಣಿ’ ಹೊರತಂದ 2021ನೇ ಸಾಲಿನ ‘ದೀಪಾವಳಿ ವಿಶೇಷಾಂಕ’ವನ್ನು ಕಲಬುರಗಿಯಲ್ಲಿ ಮಂಗಳವಾರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಅಧ್ಯಕ್ಷರೂ ಆದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಹಾಗೂ ಕಾರ್ಯದರ್ಶಿ ಆರ್‌.ವೆಂಕಟೇಶ ಕುಮಾರ ಅವರು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿದ ಶಾಸಕ, ‘ಪ್ರಜಾವಾಣಿ ಪತ್ರಿಕೆ ಹೊರತಂದ ದೀಪಾವಳಿಯ ವಿಶೇಷಾಂಕ ತುಂಬ ಅಚ್ಚುಕಟ್ಟಾಗಿ ಮೂಡಿಬಂದಿದೆ. ವರ್ಣರಂಜಿತವಾದ ಪುಟಗಳು, ಮೇಧಾವಿಗಳ ಲೇಖನ– ಕತೆಗಳು, ಆಕರ್ಷಕ ಚಿತ್ರಗಳನ್ನೂ ಒಳಗೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷದ ವಿಶೇಷಾಂಕದಲ್ಲಿ ಹಿರಿಯರು ಹಾಗೂ ಯುವ ಬರಹಗಾರರ ಕತೆ, ಕವನಗಳಿವೆ. ವಿಶೇಷಾಂಕದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಗೆದ್ದವರ ಕವನಗಳಿರುವುದೂ ವಿಶೇಷ. ಯುವ ಪ್ರತಿಭೆಗಳಿಗೆ ಸ್ಫೂರ್ತಿದಾಯಕವಾಗುವ ಲೇಖನಗಗಳು, ಪ್ರಸಕ್ತ ವಿದ್ಯಮಾನ, ಹಾಸ್ಯಲೇಖನಗಳನ್ನೂ ಒಳಗೊಂಡಿದೆ. ದೇಶ ವಿಭಜನೆ ಕಾಲದ ಇತಿಹಾಸ, ವರ್ತಮಾನ, ವಿಜ್ಞಾನ ಲೋಕದಲ್ಲಿ ನಾವು ಕ್ರಮಿಸಿದ ದೂರ, ಕೃಷಿ, ಸಿನಿಮಾ.. ಹೀಗೆ ಎಲ್ಲ ಆಯಾಮ ಗಳಲ್ಲೂ ಚಿಂತನೆಗಳಿವೆ. ವಿಶೇಷವಾಗಿ ಭೀಮಾ ತೀರದ ಜನಮನ, ಜೀವನ, ಸಾಂಸ್ಕೃತಿಕ ಬದುಕಿನ ಮೇಲೆ ಬೆಳಕು ಚೆಲ್ಲುವ ಬರಹ– ಚಿತ್ರಗಳೂ ಗಮನಾರ್ಹ.ವಿಶೇಷಾಂಕ ಮಾರುಕಟ್ಟೆಯಲ್ಲಿ ಲಭ್ಯವಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.