ADVERTISEMENT

‘ಪ್ರಜಾವಾಣಿ ಯುವ ಸಾಧಕರು–2020’ ಪ್ರಮಾಣ ಪತ್ರಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 13:56 IST
Last Updated 24 ಜನವರಿ 2020, 13:56 IST
ಕಲಬುರ್ಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ಗುರುವಾರ ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಶೀಪ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. - Photo/ Prashanth HG
ಕಲಬುರ್ಗಿಯ ಎಸ್ ಎಂ ಪಂಡಿತ್ ರಂಗ ಮಂದಿರದಲ್ಲಿ ಗುರುವಾರ ಪ್ರಜಾವಾಣಿ ಕ್ವಿಜ್ ಚಾಂಪಿಯನ್ ಶೀಪ್ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. - Photo/ Prashanth HG   

ಕಲಬುರ್ಗಿ: ಇಲ್ಲಿನ ಡಾ. ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಗುರುವಾರ ಕಿಕ್ಕಿರಿದು ಸೇರಿದ್ದ ಯುವ ಮನಸ್ಸುಗಳ ಮಧ್ಯೆ ‘ಪ್ರಜಾವಾಣಿ ಯುವ ಸಾಧಕ’ರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿಲ್ಲೆಯ ಮೂಲೆಮೂಲೆಯಿಂದ ಹರಿದು ಬಂದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಓದುಗರು ನಿರಂತರ ಕರತಾಡಣದ ಮೂಲಕ ಅಭಿನಂದನೆ ಸುರಿಮಳೆಗೈದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಲಬುರ್ಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜಾ ಪಿ. ಹಾಗೂ ಈ ಸಾಧಕರನ್ನು ಹೆಕ್ಕಿ ತೆಗೆದ ತೀರ್ಪುಗಾರರಾದ ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಅರ್ಥಶಾಸ್ತ್ರಜ್ಞರಾದ ಸಂಗೀತಾ ಕಟ್ಟಿಮನಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ, ಸಾಹಿತಿ ವಿಕ್ರಮ ವಿಸಾಜಿ ಅವರೂ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಯುವ ಸಾಧಕರು–2020: ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕು ಧನ್ನೂರ ಗ್ರಾಮದ ಮಾಲಾ ಎಸ್‌.ಐ. ಧನ್ನೂರ (ಸಮಾಜ ಸೇವೆ), ಅಫಜಲಪುರ ತಾಲ್ಲೂಕಿನ ಕುಡಿಯೂರು ಗ್ರಾಮದ ದೇವುಕುಮಾರ ಸಾತಳಗಾಂವ (ಹಾಸ್ಯ ಕಲಾವಿದ),ಶಹಾಬಾದ್‌ಜಗದೀಶ ಚಂದ್ರಕಾಂತ ಪಾಟೀಲ (ರಂಗಭೂಮಿ), ಕಲಬುರ್ಗಿಯ ಡಾ.ಅಂಕಿತಾ ಜೋಶಿ (ವೈದ್ಯಕೀಯ), ಶರಣಬಸಪ್ಪ ಶ್ರೀಮಂತ ಅಂಬೆಸಿಂಗೆ (ನವೋದ್ಯಮ), ಚಿಂಚೋಳಿ ತಾಲ್ಲೂಕು ಚಿಮ್ಮಾಈದಲಾಯಿ ಗ್ರಾಮದ ಸಿದ್ಧಾರ್ಥ ಡಿ. ಚಿಮ್ಮಾಈದಲಾಯಿ (ಸಂಗೀತ),ಕಾಳಗಿ ತಾಲ್ಲೂಕಿನ ರಟಕಲ್ ಗ್ರಾಮದ ರೇವಣಸಿದ್ಧ ಬಡಾ (ಪರಿಸರ).

ADVERTISEMENT

ಬಳ್ಳಾರಿಯ ಸೌಮ್ಯಶ್ರೀ ರಾಜು ಹಿರೇಮಠ (ಶಾಸ್ತ್ರೀಯ ನೃತ್ಯ). ಯಾದಗಿರಿ ನಗರದ ಸಾಂಗ್ಲಿಯಾನ (ಉಚಿತ ಆಟೊ ಸೇವೆ), ಜಿಲ್ಲೆಯ ಯರಗೋಳ ಗ್ರಾಮದ ಮರಿಲಿಂಗ (ಸಿನಿಮಾ). ರಾಯಚೂರು ಜಿಲ್ಲೆಲಿಂಗಸುಗೂರು ತಾಲ್ಲೂಕು ಜಂಗೀರಾಂಪೂರ ತಾಂಡಾದ ಸಂಗೀತಾ ಪವಾರ (ಕೃಷಿ),ಮಾನ್ವಿ ತಾಲ್ಲೂಕಿನ ಬಾಗಲವಾಡ ಗ್ರಾಮದ ಶಾರದಮ್ಮ ಅನಿಲಕುಮಾರ ಮಾಳಗೆ (ಸಮಾಜ ಸೇವೆ),ಸಿಂಧನೂರು ತಾಲ್ಲೂಕಿನ ಬೆಳಗುರ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಟ್ರೇಶ ಬಿ. (ಮಕ್ಕಳ ಪತ್ರಿಕೆ),

ಕೊಪ್ಪಳ ಜಿಲ್ಲೆಕುಕನೂರಿನ ಮುಂಡರಗಿ ಅನ್ನದಾನೇಶ್ವರ ಶಾಖಾ ಮಠದ ಉಸ್ತುವಾರಿಮಹಾದೇವ ದೇವರು (ಅಧ್ಯಾತ್ಮ),ಶಹಾಪುರದವರಾದ ಇಕ್ಬಾಲ್ ಶರುಮುದ್ದಿನ್‌ ಪಠಾಣ (ಅನಾಥ ಶವಗಳ ಸಂಸ್ಕಾರ).ಬೀದರ್ ಜಿಲ್ಲೆಯ ಅಲಿಯಾಬಾದ್‌ನಕಪಿಲ ಪಿ. ಹುಮನಾಬಾದೆ (ಸಾಹಿತ್ಯ),ಭಾಲ್ಕಿ ತಾಲ್ಲೂಕಿನ ಖಟಕ ಚಿಂಚೋಳಿ ಗ್ರಾಮದ ಪ್ರಕಾಶ ಅಮೃತಪ್ಪ ಉಮ್ಮರಗೆ (ಚಿತ್ರಕಲೆ) ಅವರು ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.

ರಾಯಚೂರಿನ ವಿದ್ಯಾಧರ ಪಾಟೀಲ (ವಿಶ್ವಕಪ್‌ ಕ್ರಿಕೆಟ್‌). ಹುಮನಾಬಾದ್‌ ತಾಲ್ಲೂಕು ಧಮ್ಮನಸೂರು ಗ್ರಾಮದ ನಿಶಾ ತಾಳಂಪಳ್ಳಿ (ಮಾಡೆಲಿಂಗ್‌),ಕಲಬುರ್ಗಿಯವರಾದ ಪ್ರಿಯಾಂಕ ಚಿಂಚೋಳಿ ಅವರ ಪಾಲಕರು ಪ್ರಮಾಣ ಪತ್ರ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.