
ಜೇವರ್ಗಿ: ಕರದಾಳ ಗ್ರಾಮದ ಬ್ರಹ್ಮಶ್ರೀ ನಾರಾಯಣ ಗುರುಗಳ ಶಕ್ತಿ ಪೀಠದಿಂದ ಬೆಂಗಳೂರಿನವರೆಗೆ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆಯು ಐದನೇ ದಿನವಾದ ಶುಕ್ರವಾರ ಬೆಳಿಗ್ಗೆ ಜೇವರ್ಗಿಯಿಂದ ತಾಲ್ಲೂಕಿನ ಮುದಬಾಳ.ಬಿ ಗ್ರಾಮದವರೆಗೆ ಸಾಗಿತು.
ನಾರಾಯಣಗುರು ಪ್ರತಿಮೆ ಹೊತ್ತ ಸಾರೋಟಿನೊಂದಿಗೆ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ
ಐದನೇ ದಿನ ಪಾದಯಾತ್ರೆ ಪಟ್ಟಣದಿಂದ 20 ಕಿ.ಮೀ ದಾರಿ ಕ್ರಮಿಸಿ ಮುದಬಾಳ.ಬಿ ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಿದರು.
ತಾಲ್ಲೂಕಿನ ಈಡಿಗ ಸಮಾಜದ ಅಧ್ಯಕ್ಷ ನಾಗರಾಜ ಗುತ್ತೇದಾರ, ಮುಖಂಡರಾದ ಶಿವರಾಜ ಗುತ್ತೇದಾರ, ದೇವಿಂದ್ರಪ್ಪ ಗುತ್ತೇದಾರ, ಮಂಜುನಾಥ ಗುತ್ತೇದಾರ, ನವೀನ ಗುತ್ತೇದಾರ, ವೆಂಕಯ್ಯ ಗುತ್ತೇದಾರ, ರಾಜಶೇಖರ ಗುತ್ತೇದಾರ ಅವರಾದ ಸೇರಿದಂತೆ ಅನೇಕರು ಸ್ವಾಮೀಜಿಯೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.