ADVERTISEMENT

ಕೋವಿಡ್‌ ಸೋಂಕಿತರನ್ನುಅಪರಾಧಿಗಳಂತೆ ನೋಡಬೇಡಿ: ಮುಹಮ್ಮದ್ ಝಿಯಾಉಲ್ಲಾ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2020, 12:33 IST
Last Updated 10 ಏಪ್ರಿಲ್ 2020, 12:33 IST
ಮುಹಮ್ಮದ್ ಝಿಯಾಉಲ್ಲಾ
ಮುಹಮ್ಮದ್ ಝಿಯಾಉಲ್ಲಾ   

ಕಲಬುರ್ಗಿ: ‘ಕೋವಿಡ್‌–19 ಸೋಂಕಿತರು ಹಾಗೂ ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದವರನ್ನು ‘ಅಪರಾಧಿಗಳು’ ಎಂಬಂತೆ ನೋಡುವ ದೃಷ್ಟಿಕೋನ ಬದಲಾಗಬೇಕು. ರೋಗ ಯಾರಿಗಾದರೂ ಬರಬಹುದು. ಹಾಗಾಗಿ, ಇದರಲ್ಲಿ ಯಾರನ್ನೂ ದೂಷಿಸುವ, ದೂರ ತಳ್ಳುವ ಕೆಲಸ ಸಲ್ಲದು. ಅಗತ್ಯವಿದ್ದವರ ಸಹಾಯಕ್ಕೆ ಮುಂದಾಗುವುದೇ ನಿಜವಾದ ಮಾನವೀಯತೆ’ ಎಂದುಜಮಾತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಘಟಕದ ಸಂಚಾಲಕಮುಹಮ್ಮದ್ ಝಿಯಾಉಲ್ಲಾ ತಿಳಿಸಿದ್ದಾರೆ.

‘ಕೊರೊನಾಗೆ ಯಾವುದೇ ಜಾತಿ, ಧರ್ಮದ ನಂಟು ಕಟ್ಟುವುದು ಸರಿಯಲ್ಲ. ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳಬೇಕು ಎಂಬ ಉದ್ದೇಶ ಯಾರಿಗೂ ಇರುವುದಿಲ್ಲ. ಆದರೆ, ಕೆಲವು ಹಿತಾಸಕ್ತಿಗಳು ಇದಕ್ಕೆ ಧರ್ಮದ್ವೇಷದ ಬೀಜ ಬಿತ್ತುತ್ತಿದ್ದಾರೆ. ಭಾರತವು ಬಹುತ್ವದ ಮೇಲೆ ನಿಂತ ದೇಶ. ಎಲ್ಲವೂ ಸರಿಯಾಗಿ ಇದ್ದಾಗ ತೋರಿಸುವುದು ಮಾತ್ರ ಏಕತೆ ಅಲ್ಲ. ಸಂಕಷ್ಟದ ಸಂದರ್ಭದಲ್ಲೂ ಒಬ್ಬರಿಗೊಬ್ಬರು ಒಂದಾಗಿ ನಡೆಯುವುದು ನಿಜವಾದ ಏಕತೆ. ನಾವು ಎಚ್ಚರಿಕೆಯಿಂದ ಇರುವ ಜತೆಗೆ ಸೋಂಕಿತರ ಸಹಾಯಕ್ಕೆ ನೆರವಾಗಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT