ADVERTISEMENT

ಪ್ರಾಂಶುಪಾಲ, ಕಂಪ್ಯೂಟರ್ ಆಪ‍ರೇಟರ್ ವಿರುದ್ಧ ಪೊಕ್ಸೊ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 10:59 IST
Last Updated 13 ಸೆಪ್ಟೆಂಬರ್ 2022, 10:59 IST
   

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಾಂಶುಪಾಲ ಚೇತನ್ ರೆಡ್ಡಿ ಮತ್ತು ಕಂಪ್ಯೂಟರ್ ಆಪರೇಟರ್ ಸಂಗಮೇಶ ವಿರುದ್ಧ ಪೊಕ್ಸೊ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಬಾಲಕಿಯರು ಆರೋಪಿಸಿದ ವಿಡಿಯೊ ಸಾಮಾಜಿಕ‌ ಮಾಧ್ಯಮದಲ್ಲಿ ಸೋಮವಾರದಿಂದ ಹರಿದಾಡುತ್ತಿದೆ. ಬಾಲಕಿಯರು ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಇದಕ್ಕೂ ಮುನ್ನ ತಹಶೀಲ್ದಾರ್ ಅಂಜುಮ್ ತಬಸ್ಸುಮ್, ಡಿವೈಎಸ್ಪಿ ಕೆ. ಬಸವರಾಜ, ಸಿಪಿಐ ಅಂಬಾರಾಯ ಕಮಾನಮನಿ, ಪಿಎಸ್ಐ ಉದ್ದಂಡಪ್ಪ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.

ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಶಾಲೆ‌ ಮಕ್ಕಳು ಬೆಳಿಗ್ಗೆಯಿಂದ ಊಟ ಮಾಡಿಲ್ಲ ಎನ್ನಲಾಗಿದೆ. ಇದನ್ನು ಅರಿತ ಪೊಲೀಸರು ಮನವೊಲಿಸಿ, ಊಟ ಮಾಡಿಸಿದರು. ಆರೋಪಿಗಳ ವಿರುದ್ಧ ಬಾಲಕಿಯರ ಪೋಷಕರು ಮತ್ತು ಸ್ಥಳೀಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಮುಖ ಆರೋಪಿ ಸಂಗಮೇಶ ಎಂಬಾತನಿಗೆ ಪಾಲಕರು ಥಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.