ADVERTISEMENT

ಗು.ವಿ.ವಿ. ನೂತನ ಕುಲಪತಿಯಾಗಿ ಪ್ರೊ.ದಯಾನಂದ ಅಗಸರ ನೇಮಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 12:33 IST
Last Updated 22 ಜನವರಿ 2021, 12:33 IST
ಪ್ರೊ.ದಯಾನಂದ ಅಗಸರ
ಪ್ರೊ.ದಯಾನಂದ ಅಗಸರ   

ಕಲಬುರ್ಗಿ: ಸುಮಾರು ಒಂದೂವರೆ ವರ್ಷದಿಂದ ಖಾಲಿಯಿದ್ದ ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಇದೇ ವಿ.ವಿ.ಯ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ದಯಾನಂದ ಅಗಸರ ಅವರನ್ನು ವಿ.ವಿ. ಕುಲಾಧಿಪತಿಯೂ ಆದ ರಾಜ್ಯಪಾಲರು ಶುಕ್ರವಾರ ನೇಮಕ ಮಾಡಿದ್ದಾರೆ.

ಪ್ರೊ. ಅಗಸರ ಅವರಿಗೆ ಹಂಗಾಮಿ ಕುಲಪತಿ ಪ್ರೊ. ಚಂದ್ರಕಾಂತ ಯಾತನೂರ ಅವರು ಅಧಿಕಾರ ಹಸ್ತಾಂತರಿಸಿದರು.

ಮೂಲತಃ ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದವರಾದ ಪ್ರೊ. ಅಗಸರ ಅವರು ಗುಲಬರ್ಗಾ ವಿ.ವಿ. ಕುಲಸಚಿವರಾಗಿ ಹಿಂದೆ ಕರ್ತವ್ಯ ನಿರ್ವಹಿಸಿದ್ದರು.

ADVERTISEMENT

ವಿ.ವಿ.ಯಲ್ಲಿ ಶೇ 70ರಷ್ಟು ಬೋಧಕ–ಬೋಧಕೇತರ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡುವ ಹಾಗೂ ಸಕಾಲಕ್ಕೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸುವ ಸವಾಲು ನೂತನ ಕುಲಪತಿಯ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.