ADVERTISEMENT

ವಿದ್ಯಾವಂತರು ಅಂಬೇಡ್ಕರ್ ಕನಸು ನನಸಾಗಿಸಿ: ಡಾ.ಎಚ್.ಟಿ. ಪೋತೆ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2021, 3:28 IST
Last Updated 26 ಸೆಪ್ಟೆಂಬರ್ 2021, 3:28 IST
ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಶನಿವಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಫ್ಲೆಕ್ಸ್‌ ಮತ್ತು ಭಾರತದ ಸಂವಿಧಾನದ ಪ್ರಿಯಾಂಬಲ್‌ನ ಪ್ರತಿಗಳನ್ನು ಶನಿವಾರ ಡಾ.ಎಚ್‌.ಟಿ. ಪೋತೆ ಉದ್ಘಾಟಿಸಿದರು. ಡಾ.ವಿ.ಟಿ. ಕಾಂಬಳೆ, ಡಾ.ಡಿ.ಬಿ. ಪಾಟೀಲ, ಡಾ.ವಿಜಯಕುಮಾರ ಗೋಪಾಳೆ, ಡಾ.ರಾಜಕುಮಾರ ದಣ್ಣೂರ ಇದ್ದರು
ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಶನಿವಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಫ್ಲೆಕ್ಸ್‌ ಮತ್ತು ಭಾರತದ ಸಂವಿಧಾನದ ಪ್ರಿಯಾಂಬಲ್‌ನ ಪ್ರತಿಗಳನ್ನು ಶನಿವಾರ ಡಾ.ಎಚ್‌.ಟಿ. ಪೋತೆ ಉದ್ಘಾಟಿಸಿದರು. ಡಾ.ವಿ.ಟಿ. ಕಾಂಬಳೆ, ಡಾ.ಡಿ.ಬಿ. ಪಾಟೀಲ, ಡಾ.ವಿಜಯಕುಮಾರ ಗೋಪಾಳೆ, ಡಾ.ರಾಜಕುಮಾರ ದಣ್ಣೂರ ಇದ್ದರು   

ಕಲಬುರ್ಗಿ: ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಭಾವನೆಗಳನ್ನು ಎತ್ತಿಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಂಡ ಪ್ರಜಾಪ್ರಭುತ್ವದ ಕನಸು ನನಸಾಗುತ್ತದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್.ಟಿ. ಪೋತೆ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಶನಿವಾರ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಫ್ಲೆಕ್ಸ್‌ ಮತ್ತು ಭಾರತದ ಸಂವಿಧಾನದ ಪ್ರಿಯಾಂಬಲ್‌ನ ಪ್ರತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರ ಜೀವನ ಚರಿತ್ರೆ ಹಾಗೂ ಅವರು ಸಾಗಿಸಿದ ಬದುಕು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು. ಆ ದಿಸೆಯಲ್ಲಿ ಯುವ ಜನತೆ ಒಂದಿಷ್ಟು ದೂರ ಕ್ರಮಿಸಿದ್ದಾರೆ. ಹಾಗಾಗಿ, ನಾವೆಲ್ಲರೂ ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯವಾಗಿದೆ’ ಎಂದು ಹೇಳಿದರು.

ADVERTISEMENT

‘ಅಕ್ಷರಸ್ಥರೆ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದೇವೆ. ಅವರ ಹಾಕಿ ಕೊಟ್ಟಿರುವ ಮಾರ್ಗದಲ್ಲಿ ಯಾರೂ ನಡೆಯುತ್ತಿಲ್ಲ. ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಸ್ಮೃತಿ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪ ತೊಟ್ಟಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ’ ಎಂದರು.

ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಡೀನ್‌ ಡಾ.ವಿ.ಟಿ. ಕಾಂಬಳೆ ಮಾತನಾಡಿ, ‘ನಮ್ಮ ದೇಶವನ್ನು ಒಗ್ಗಟ್ಟಾಗಿ ಮುಂದುವರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ. ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆಗಳನ್ನು ಯುವ ಜನರಿಗೆ ಮುಟ್ಟಿಸುವ ದಿಸೆಯಲ್ಲಿ ಅವರು ಜೀವನ ಪ್ರಯೋಗ ಹೆಚ್ಚು ಪ್ರಭಾವಶಾಲಿ ಹಾಗೆ ಅಂಬೇಡ್ಕರ್ ಅವರುಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿವೆ ಎನ್ನುವದನ್ನು ಮರೆಯಬಾರದು’ ಎಂದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜನಾಧಿಕಾರಿ ಡಾ.ಡಿ.ಬಿ. ಪಾಟೀಲ, ಡಾ.ವಿಜಯಕುಮಾರ ಗೋಪಾಳೆ, ಡಾ.ರಾಜಕುಮಾರ ದಣ್ಣೂರ, ಡಾ.ಅಮೀರ ಮತ್ತು ವಿದ್ಯಾರ್ಥಿ– ವಿದ್ಯಾರ್ಥಿನಿಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.